ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಪಾವನಭೂಮಿ ಹಲಗಾ ಗ್ರಾಮದ ಶ್ರೀ ಮರಗಾಯಿ ದೇವಿ ಮಂದಿರ ನಿರ್ಮಾಣದ ಪೂಜಾ ಕಾರ್ಯಕ್ರಮವನ್ನು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನೆರವೇರಿಸಿದರು.
ಹಲಗಾ ಗ್ರಾಮದ ಜನರು ಸಂಯಮಿಗಳೂ, ಉದಾರಿಗಳೂ ಆಗಿದ್ದು, ಇಲ್ಲಿಯ ಭೂಮಿ ಅತ್ಯಂತ ಪವಿತ್ರವಾಗಿದೆ. ಗ್ರಾಮಕ್ಕೆ ಜನವಿರೋಧಿ ಯೋಜನೆಗಳು ಬರಲು ಅವಕಾಶ ನೀಡುವುದಿಲ್ಲ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮದ ಜನರ ಸಲಹೆ ಪಡೆದು ಅಗತ್ಯವಾದ ಅಭಿವೃದ್ಧಿ ಕಾಮಗಾರಿಗಳನ್ನು ತರಲು ಪ್ರಯತ್ನಿಸಲಾಗುವುದು ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ಮುತ್ನಾಳ ಕೇದಾರ ಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಮರಗಾಯಿ ದೇವಿ ಸೇವಾ ಕಮೀಟಿಯವರು, ಗ್ರಾಮದ ಹಿರಿಯರು, ಗಣೇಶೋತ್ಸವ ಮಂಡಳ, ಯುವಕ ಮಂಡಳ, ಭಗಿನಿ ಮಂಡಳ, ಮಹಿಳಾ ಮಂಡಳ ಹಾಗೂ ಇತರ ಭಕ್ತ ಮಂಡಳದ ಜನರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ