Politics

*ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ: ಹೊಸ ಬಾಂಬ್ ಸಿಡಿಸಿದ ಬಿ.ವೈ.ವಿಜಯೆಂದ್ರ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ. ದೆಹಲಿಗೆ ಹೋಗಿ ಎಷ್ಟೇ ಪ್ಯಾಚಪ್ ಮಾಡಿದರೂ ಏನೂ ಪ್ರಯೋಜನವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ.ವಿಜಯೇಂದ್ರ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಮುಡಾದಲ್ಲಿ ಅಕ್ರಮವಾಗಿ ಸೈಟ್ ಖರೀದಿ ಮಾಡಿದ್ದಾರೆ. ಒಂದೆರಡಲ್ಲ 14 ನಿವೇಶನಗಳನ್ನು ಖರೀದಿಸಿದ್ದಾರೆ. ಇದು ಕಂಟಕವಾಗುತ್ತೆ ಎಂದು ಅರ್ಥ ಆದ್ಮೇಲೇ ನಿವೇಶನಗಖನ್ನು ವಾಪಾಸ್ ಕೊಟ್ಟಿದ್ದಾರೆ. ಮುಡಾದಲ್ಲಿ 5000 ಕೋಟಿ ಹಗರನ ನಡೆದಿದೆ. ಮುಡಾ ಮಾತ್ರವಲ್ಲ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ವಾಗ್ದಾಳಿ ನಡೆಸಿದರು.

ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಅವರಿಗೆ ಕಂಟಕವಾಗಲಿದೆ. ಅವರು ತಾನು ಅಕ್ರಮ ಮಾಡಿಲ್ಲ ಎಂದರೂ ಅಕ್ರಮ ಸಾಬೀತಾಗಿದೆ. ದೆಹಲಿಗೆ ಹೋಗಿ ಎಷ್ಟೇ ಪ್ಯಾಚಪ್ ಮಾಡಿದರೂ ಏನೂ ಆಗಲ್ಲ. ಅವರು ರಾಜೀನಾಮೆ ಕೊಡಲೇಬೇಕಾಗುತ್ತದೆ. ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button