ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ರಾಜಾಜಿನಗರದ ಶ್ರೀವಾಣಿ ವಿದ್ಯಾಕೇಂದ್ರದ 9ನೇ ತರಗತಿಯ ವಿದ್ಯಾರ್ಥಿನಿ, ಎನ್ ಸಿ ಸಿ ಕೆಡೆಟ್ ಸಾರ್ಜೆಂಟ್ ಅನ್ವಿತಾ ಸಾವಿತ್ರಿ ಭಟ್ ಇವಳು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾಳೆ.
ಕಳೆದ ಸಪ್ಟೆಂಬರಿನಿಂದ ನಾಲ್ಕು ತಿಂಗಳುಗಳ ಕಾಲ ನಡೆದ 7 ಹಂತದ ಕಠಿಣ ಆಯ್ಕೆ ಶಿಬಿರಗಳಲ್ಲಿ ಸಾಂಸ್ಕೃತಿಕ (ಮ್ಯಾಂಡೋಲಿನ್ ವಾದನ ಮತ್ತು ಗಾಯನ) ವಿಭಾಗದಲ್ಲಿ ಆಯ್ಕೆಗೊಂಡು, ಪ್ರಸ್ತುತ ಡಿಸೆಂಬರ್ 28ರಿಂದ ಜನವರಿ 31ರವರೆಗೆ ನಡೆಯುತ್ತಿರುವ ದೆಹಲಿ ಶಿಬಿರದಲ್ಲಿ ಭಾಗವಹಿಸುತ್ತಿದ್ದಾಳೆ.
ಈಗಾಗಲೇ ಉಪರಾಷ್ಟ್ರಪತಿಗಳ ಭೇಟಿ, ರಕ್ಷಣಾ ಮಂತ್ರಿಗಳ ಭೇಟಿ, ಭೂಸೇನಾ ಮುಖ್ಯಸ್ಥರ ಭೇಟಿ ಹಾಗೂ ವಾಯುಸೇನಾ ಮುಖ್ಯಸ್ಥರ ಭೇಟಿಯಲ್ಲಿ ಪಾಲ್ಗೊಂಡಿದ್ದಾಳೆ. ಅಲ್ಲದೆ ದೆಹಲಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡು ಜನವರಿ 27ರಂದು ನಡೆಯುವ ಪ್ರಧಾನ ಮಂತ್ರಿಗಳ ರ್ಯಾಲಿಯ ಪಥಸಂಚಲನದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ.
ಈ ಪ್ರತಿಭಾವಂತೆ ಮಲ್ಲೇಶ್ವರಂ ಸಮೀಪದ ಮಾರುತಿ ಬಡಾವಣೆ ನಿವಾಸಿಗಳಾದ ಮುರಳಿ ಕುಕ್ಕುಪುಣಿ ಹಾಗೂ ಡಾ. ಚೈತ್ರಲಕ್ಷ್ಮಿ ಕಮ್ಮಜೆ ಇವರ ಸುಪುತ್ರಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ