
ಪ್ರಗತಿವಾಹಿನಿ ಸುದ್ದಿ: ವ್ಯಾಪಾರದಲ್ಲಿ ನಷ್ಟವುಂಟಾಗಿ ಮಾನಸಿಕ ಅಸ್ವಸ್ಥನಂತಾಗಿದ್ದ ಮಗನೊಬ್ಬ ತನ್ನದೇ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಅಫಾನ್ ಎಂಬ ಯುವಕ ನಿನ್ನೆ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮೂರು ಮನೆಗಳಿಗೆ ತೆರಳಿ ತನ್ನದೇ ಕುಟುಂಬದ ಐವರನ್ನು ಹತ್ಯೆ ಮಾಡಿದ್ದಾನೆ. ಬಳಿಕ ವಿಷ ಸೇವಿಸಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ತಾನು ಮಾಡಿದ ಕೃತ್ಯವನ್ನು ವಿವರಿಸಿದ್ದಾನೆ.
ಮೊದಲು ಅಜ್ಜಿ ಮನೆಗೆ ಅಜ್ಜಿ ಸಲ್ಮಾ ಅವರನ್ನು ಹತ್ಯೆ ಮಾಡಿದ್ದಾನೆ. ಬಳಿಕ ಚಿಕ್ಕಪ್ಪ ಲತೀಫ್ ನನ್ನು ಹತ್ಯೆ ಮಾಡಿದ್ದಾನೆ. ಬಳಿಕ ಚಿಕ್ಕಮ್ಮ ಶಾಹಿದಾ, ಮನೆಯಲ್ಲಿದ್ದ 14 ವರ್ಷದ ತಮ್ಮ, ತನ್ನ ಜೊತೆ ಇದ್ದ ಸ್ನೇಹಿತೆ ಫರ್ಶಾನಾಳನ್ನು ಹತ್ಯೆ ಮಾಡಿದ್ದಾನೆ. ಬಳಿಕ ತನ್ನ ತಾಯಿ ಶೆಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆ ಬಳಿಕ ತಾನೂ ಆತ್ಮಹತ್ಯೆಗೆ ವಿಷ ಸೇವಿಸಿದ್ದು, ಪೊಲಿಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಪೊಲಿಸರು ಸ್ಥಳಕ್ಕಾಗಮಿಸಿ ನೋಡಿದಾಗ ಆರೋಪಿ ಅಫಾನ್ ತಾಯಿ ಶೆಮಿ ಹಲ್ಲೆಗೊಳಗಾಗಿದ್ದರೂ ಬದುಕಿರುವುದು ಗೊತ್ತಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ