
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ನಲ್ಲಿ ಒಳಜಗಳ ಹೆಚ್ಚಾಗಿದೆ. ನಾಯಕರ ನಡುವೆ ಸಾಮರಸ್ಯ ಇಲ್ಲ. ಆದಷ್ಟೂ ಶೀಘ್ರ ಕರ್ನಾಟಕದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಡಿಕೆಶಿ ಬಿಜೆಪಿಗೆ ಹತ್ತಿರವಾಗುತ್ತಿದ್ದಾರಾ ? ಅಥವಾ ಬಿಜೆಪಿ ಸೇರುವ ಕಾಲ ಸನಿಹವಾಗುತ್ತಿದೆಯಾ ಎಂಬ ಮಾತಿಗೆ ನಕ್ಕು ಸುಮ್ಮನಾದ ವಿಜಯೇಂದ್ರ, ಮೌನಕ್ಕೆ ಹಾರಿ ಕುತೂಹಲ ಹುಟ್ಟುಹಾಕಿದರು.
ಮಹಾಕುಂಭ ಮೇಳ ಐತಿಹಾಸಿಕ ಕಾರ್ಯಕ್ರಮ. ಹಿಂದೂ ಸಂಪ್ರದಾಯದ ಬಗ್ಗೆ ನಂಬಿಕೆ ಇರೋರು ಅಲ್ಲಿಗೆ ತೆರಳಿ ಸ್ನಾನ ಮಾಡಿದ್ದಾರೆ. ಇಶಾ ಫೌಂಡೇಶನ್ ನಲ್ಲಿಯೂ ಕೂಡ ಧಾರ್ಮಿಕ ಕಾರ್ಯಕ್ರಮ ನಡೆದಿದೆ. ಡಿಕೆಶಿ ಎರಡರಲ್ಲಿಯೂ ಭಾಗಿಯಾಗಿದ್ದಾರೆ. ಇದರಲ್ಲಿ ವಿಶೇಷತೆ ಇಲ್ಲ ಎಂದು ವಿಜಯೇಂದ್ರ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ