
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ ನಲವಡೆ ಎಂಬಾತ ಪ್ರಿತಿಸಿ ಮದುವೆ ಆಗಿ ಈಗ ನನಗೆ ಕೈಗೊಟ್ಟಿದ್ದಾನೆ ಎಂದು ಆರೋಪಿಸಿ ಸಾಮಾಜೀಕ ಕಾರ್ಯಕರ್ತರೆ ಪ್ರಮೋದಾ ಹಜಾರೆಯವರು ಏಕಾಂಕಿ ಹೋರಾಟ ನಡೆಸಿದ್ದಾರೆ.
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಕ್ಷಯ್ ಎಂಬಾತ ಸಾಮಾಜೀಕ ಕಾರ್ಯಕರ್ತೆ ಪ್ರಮೋದಾ ಹಜಾರೆಗಿಂತ 14 ವರ್ಷ ಚಿಕ್ಕವಯಸ್ಸಿನವನು. ಪ್ರೀತಿಸಿ ಮದುವೆ ಆಗಿ ನನಗೆ ಮೋಸ ಮಾಡಿದ್ದಾನೆ ಎಂದು ನೊಂದ ಸಾಮಾಜಿಕ ಕಾರ್ಯಕರ್ತೆ ಪ್ರಮೋದಾ ಹಜಾರೆಯವರು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಕುಳಿತು ಅನ್ಯಾಯ ಎಸಗಿರುವ ಯೋಧನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಳಿಕ ಏಕಾಂಗಿ ಆಗಿ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಬಳಿಕ ಡಿಸಿ ಮೂಲಕ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಯೋಧ ಅಕ್ಷಯ್ ನಲವಡೆ ನನಗಷ್ಟೇ ಅಲ್ಲ, 18 ಕ್ಕೂ ಅಧಿಕ ಯುವತಿಯರಿಗೆ ಅನ್ಯಾಯ ಮಾಡಿದ್ದಾನೆ. ಆತನ ಮೋಬೈಲ್ ಸೀಜ್ ಮಾಡಿದರೆ ಎಲ್ಲವೂ ಸಿಗಲಿದೆ. ಆತನನ್ನು ಬಂಧಿಸಿ ನನಗೆ ಸೂಕ್ತ ನಾಯ ಕೊಡಿಸಬೇಕು. ಆತ ನನ್ನ ಜೊತೆ ಬಾಳಬೇಕು ಎಂದು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ