Karnataka News

*ವಸತಿ ಯೋಜನೆಯಡಿ ಮನೆಗೆ ಮನವಿ ಮಾಡಿದ್ದ ಮಹಿಳೆಯನ್ನು ಮಂಚಕ್ಕೆ ಕರೆದ ಗ್ರಾಮ ಪಂಚಾಯಿತಿ ಸದಸ್ಯ*

ಪ್ರಕರಣ ದಾಖಲು

Home add -Advt


ಪ್ರಗತಿವಾಹಿನಿ ಸುದ್ದಿ: ಕಲಬುರಗಿ ಜಿಲ್ಲೆಯ ಕಮಲಾಪುರ ತಲೂಕಿನ ಮರಗುತ್ತಿ ಗ್ರಾಮ ಪಂಚಾಯಿತಿ ಸದಸ್ಯ ನೀಲಕಂಠ ರಾಠೋಡ್ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಸರ್ಕಾರದ ಯೋಜನೆಗಳ ಅಡಿ ಮನೆ ಮಂಜೂರು ಮಾಡಿಸಿಕೊಡುವಂತೆ ಮಹಿಳೆಯೊಬ್ಬರು ಗ್ರಾಮ ಪಂಚಾಯಿತಿ ಗೆ ಬೇಡಿಕೆ ಇಟ್ಟಿದ್ದರು. ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ನೀಲಕಂಠ ನಿನಗೆ ಮನೆ ಮಾಡಿಸಿಕೊಡಬೇಕೆಂದರೆ ತನ್ನ ಜೊತೆ ಮಲಗಬೇಕು. ನೀನು ಬರದಿದ್ದರೆ ನಿನ್ನ ಮಗಳನ್ನು ಕಳಿಸು ಎಂದಿದ್ದಾನಂತೆ. ನೀಲಕಂಠ ರಾಠೋಡ್ ವಿರುದ್ಧ ಮಹಿಳೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆಯ ದೂರಿನ ಹಿನ್ನೆಲೆಯಲ್ಲಿ ರಾಠೋಡ್ ವಿರುದ್ಧ ಬಿಎನ್ ಎಸ್ ಕಾಯ್ದೆ 75, 78, 79 ಅಡಿ ಪ್ರಕರಣ ದಾಖಲಾಗಿದೆ.

Related Articles

Back to top button