
ಪ್ರಗತಿವಾಹಿನಿ ಸುದ್ದಿ: ಕೆ.ಎಸ್.ಆರ್,ಟಿ.ಸಿ ಬಸ್ ಮೇಲೆ ಪುಂಡರು ಕಲ್ಲುತೂರಾಟ ನಡೆಸಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿಯಲ್ಲಿ ನಡೆದಿದೆ.
ಇಂಚಲಕರಂಜಿಯಲ್ಲಿ ಕಿಡಿಗೇಡಿಗಳು ಹೋಳಿ ಬಣ್ಣ ಎರಚುವ ವೇಳೆ ಇತರ ವಾಹನಗಳ ಮೇಲೆ ಮಸಿ ಎರಚಿ ಬಳಿಕ ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಬಸ್ ನ ಹಿಂಬದಿ ಗಾಜು ಸಂಪೂರ್ಣ ಪುಡಿಪುಡಿಯಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ. ಬಸ್ ಬೆಳಗಾವಿಯ ರಾಯಬಾಗ ಡಿಪೋಗೆ ಸೇರಿದ್ದಾಗಿದೆ.
ಮಹಾರಾಷ್ಟ್ರದ 6 ಬಸ್ ಗಳ ಮೇಲೂ ಕಲ್ಲು ತೂರಲಾಗಿದೆ. ಭಾಷಾ ವಿವಾದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ 20 ಜನರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.