Belagavi NewsBelgaum News

*68 ವರ್ಷದ ತಾತನಿಂದ 4 ವರ್ಷದ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ*

ಆರೋಪಿಗೆ 20 ವರ್ಷ ಜೈಲುಶಿಕ್ಷೆ

ಪ್ರಗತಿವಾಹಿನಿ ಸುದ್ದಿ: ಕಳೆದ ವರ್ಷ ಫೆಬ್ರವರಿ 24ರಂದು ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಾಲ್ಕು ವರ್ಷದ ಬಾಲಕಿಗೆ ಚಾಕಲೇಟ್ ಕೊಟ್ಟು ಪುಸಲಾಯಿಸಿ ತನ್ನ ಮನೆಗೆ ಕರೆದು ಆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ನಿಸಾರ್ ಅಹ್ಮದ್ ಫಕ್ರು ಸಾಬ್ ಚಾಪ್ಗಾವಿ 68 ವರ್ಷ ಕಾಕರ ಗಲ್ಲಿ ನಂದಗಡ ಈತನ ವಿರುದ್ಧ ದಿನಾಂಕ 27.02.24ರಂದು ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು

Home add -Advt

ಈ ದೂರನ್ನು ನಂದಗಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಎಸ್ ಸಿ ಪಾಟೀಲ್ ರವರು ದಾಖಲಿಸಿ ತನಿಖೆ ಪೂರೈಸಿ ದಿನಾಂಕ 17.04. 2024 ರಂದು ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪನ ಪತ್ರವನ್ನು ಸಲ್ಲಿಸಿದರು ಸದರಿ ಆರೋಪಿತನಗೆ ದಿನಾಂಕ 28.02.2024 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು ತನಿಕಾ ಸಹಾಯಕ ರಾಗಿ ಆರ್ ಎಸ್ ಕೆಮಾಲೆ ರವರು ಕರ್ತವ್ಯ ನಿರ್ವಹಿಸಿದ್ದರು.

ಈ ದಿವಸ ದಿನಾಂಕ 3/4/2025 ರಂದು ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾಧ ಸಿ ಎಮ್ ಪುಷ್ಪಲತಾ ರವರು ಆರೋಪಿತನಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿಗಳ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಎಲ್ ವಿ ಪಾಟೀಲ್ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು
ಆರೋಪಿತನು ಈಗ ಹಿಂಡಲಗಾ ಜೈಲುಪಾಅಲಾಗಿದ್ದಾನೆ.

ಪ್ರಕರಣ ದಾಖಲಿಸಿ ಒಂದು ವರ್ಷದೊಳಗೆ ಲೈಂಗಿಕ ದೌರ್ಜನಕ್ಕೆ ಒಳಗಾದ ಬಾಲಕಿಗೆ ನ್ಯಾಯ ಸಿಕ್ಕಿದೆ ಅತಿ ಶೀಘ್ರವಾಗಿ ನ್ಯಾಯಾಲಯದಿಂದ ವಿಚಾರಣೆಯಾಗಿ ಆರೋಪಿಗೆ ಶಿಕ್ಷೆಯಾಗಿದೆ.

Related Articles

Back to top button