Film & EntertainmentKannada NewsKarnataka NewsNationalPolitics

*ಹಸುವಿನ ಕೆಚ್ಚಲು ಕೊಯ್ದ ದುರುಳರು*

ಪ್ರಗತಿವಾಹಿನಿ ಸುದ್ದಿ: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗೋವು ಕಳ್ಳರು ಹಸುವನ್ನು ಸಾಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದರ ಕೆಚ್ಚಲು ಕೊಯ್ದಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಮ್ಮಿಹಳ್ಳಿ ಗ್ರಾಮದ ಶೇಖರಪ್ಪ ಎಂಬುವವರಿಗೆ ಸೇರಿದ್ದ 20 ಹಸುಗಳನ್ನು ಬಲವಂತವಾಗಿ ತಂತಿ ಬೇಲಿಯೊಳಗೆ ಸೇರಿಸಿ ಬೇರೆಡೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಸುವಿನ ಕೆಚ್ಚಲು ಕೊಯ್ದು ಪರಾರಿಯಾಗಿದ್ದಾರೆ.

Home add -Advt

ದುಷ್ಕರ್ಮಿಗಳು ಹಸುವಿನ ಕೆಚ್ಚಲು ಕೊಯ್ದ ಪರಿಣಾಮ ತೀವ್ರ ನೋವು ಹಾಗೂ ರಕ್ತ ಸ್ರಾವದಿಂದ ನರಳಿ ನರಳಿ ಮೃತಪಟ್ಟಿವೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button