Kannada NewsKarnataka NewsNationalPolitics

*ವಿಷಪೂರಿತ ಮದ್ಯ ಸೇವಿಸಿ 12 ಮಂದಿ ಮೃತ*

ಪ್ರಗತಿವಾಹಿನಿ ಸುದ್ದಿ: ಪಂಜಾಬ್ ನ ಅಮೃತಸರ್ ನಲ್ಲಿ ವಿಷಪೂರಿತ ಮದ್ಯ ಸೇವಿಸಿ 12 ಮಂದಿ ಮೃತಪಟ್ಟಿದ್ದರೆ, ಹಲವರು ಅಸ್ವಸ್ತರಾಗಿರುವ ಘಟನೆ ನಡೆದಿದೆ. 

ಅಮೃತಸರ್ ನ ಥೆರ್ವಾಲ್, ಮರ್ರಿ, ಪಟಲ್ ಪುರಿ, ಭಂಗಾಲಿ ಗ್ರಾಮಗಳಿಂದ ಇದುವರೆಗೂ 12 ಸಾವುಗಳು ವರದಿಯಾಗಿದೆ ಎಂದು ಅಮೃತಸರ ಗ್ರಾಮೀಣ ಪ್ರದೇಶದ ಎಸ್‌ಎಸ್‌ಪಿ ಮಣಿಂದರ್ ಸಿಂಗ್ ತಿಳಿಸಿದ್ದಾರೆ.

Home add -Advt

ಕಳೆದ ಮಾರ್ಚ್ ನಲ್ಲಿ ವಿಷಯುಕ್ತ ಮದ್ಯಸೇವನೆಯಿಂದಾಗಿ 24 ಮಂದಿ ಮೃತಪಟ್ಟಿದ್ದ ಪಂಜಾಬ್ ನಲ್ಲಿ 2020 ರಲ್ಲಿ 100 ಮಂದಿ ಸಾವನ್ನಪ್ಪಿದ್ದರು.

ಪಂಜಾಬ್ ನಲ್ಲಿ ವಿಷಪೂರಿತ, ಅಕ್ರಮ ಮದ್ಯದ ಹಾವಳಿ ಹೆಚ್ಚಾಗಿದ್ದು ಅದನ್ನು ತಡೆಗಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆ ಕುರಿತಂತೆ ತನಿಖೆ ಜಾರಿಯಲ್ಲಿದೆ.

Related Articles

Back to top button