Karnataka News

*ಸಿಡಿಲಬ್ಬರಕ್ಕೆ ಮಹಿಳೆಯರು ಸೇರಿ 11 ಜನರು ಬಲಿ*

ಪ್ರಗತಿವಾಹಿನಿ ಸುದ್ದಿ: ಭಾರಿ ಮಳೆಯೊಂದಿಗೆ ಗುಡುಗು-ಸಿಡಿಲಿಗೆ 11 ಜನರು ಮೃತಪಟ್ಟಿರುವ ಘಟನೆ ಒಡಿಶಾದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದೆ.

ಒಡಿಶಾದ ಒಡಿಶಾದ ಕೊರಾಪುಟ್, ಗಂಜಾಮ್, ಜಾಜ್ ಪುರ, ಧೆಂಕನಲ್, ಬಾಲಾಸೋರ್, ಮಯೂರ್ ಭಂಜ್ ಜಿಲ್ಲೆಗಳಲ್ಲಿ ಸಿಡಿಲಬ್ಬರಕ್ಕೆ ಮೂವರು 6 ಮಹಿಳೆಯರು ಸೇರಿ 11ಜನರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊರಾಪುಟ್ ಜಿಲ್ಲೆಯೊಂದರಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಒಡಿಶಾದಾದ್ಯಂತ ಗುಡುಗು, ಮಿಂಚು, ಸಿಡಿಲಬ್ಬರದ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button