ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶಾಸಕ ರಮೇಶ ಜಾರಕಿಹೊಳಿ ಸಾಕಷ್ಟು ಬದಲಾವಣೆ ಆಗಬೇಕಿದ್ದು, ಅವನನ್ನು ಸರಿಮಾಡಲು ಎಲ್ಲಾ ರೀತಿಯ ಯತ್ನ ಮಾಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಶಾಸಕ ರಮೇಶ ಜಾರಕಿಹೊಳಿಯನ್ನು ಹುಡುಕಿ ಹುಡುಕಿ ಭೇಟಿ ಆಗಬೇಕಿದೆ. ಮೊದಲಿನಿಂದಲೂ ಅವನು ಹಾಗೇ ಇದ್ದಾನೆ. ರಾಜಕೀಯವಾಗಿ ಅವರನಿಗೆ ಏನು ಹೇಳಬೇಕೊ ಹೇಳುವ ಯತ್ನ ಮಾಡುತ್ತೇನೆ. ಇನ್ನೂ ಫೋನ್ ಮಾಡಿಲ್ಲ. ಸಂಜೆ ಮಾತನಾಡುತ್ತೇನೆ.
ಆತ ಯಾವುದೇ ಬೇಡಿಕೆ ಇಟ್ಟಿಲ್ಲ. ನನ್ನ ಮೇಲೆ ರಮೇಶಗೆ ಯಾವುದೇ ಮುನಿಸಿಲ್ಲ ಎಂದು ಹೇಳಿದರು.
ಖಾತೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಯಾವುದೇ ಖಾತೆಯ ಬಗ್ಗೆ ಬೇಡಿಕೆ ಇಟ್ಟಿಲ್ಲ ಎಂದ ಅವರು, ಭಿನ್ನಮತ ಶಮನಕ್ಕೆ ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ. ಆರು ತಿಂಗಳಿಂದ ಬಿಜೆಪಿಯವರು ಆಪರೇಷನ್ ಬಗ್ಗೆ ಹೇಳುತ್ತಲೇ ಇದ್ದಾರೆ. ಅಸಮಾಧಾನ ಇತ್ಯರ್ಥ ಪಡಿಸುತ್ತೇವೆ. ಯಾರೂ ಪಕ್ಷ ಬಿಟ್ಟು ಹೋಗುವ ಪ್ರಶ್ನೆ ಇಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ