Kannada NewsKarnataka NewsNationalPolitics

*ಸಚಿವ ಬೈರತಿ ಸುರೇಶ್ ಅವರಿಗೆ ಮಾತೃ ವಿಯೋಗ*

ಪ್ರಗತಿವಾಹಿನಿ ಸುದ್ದಿ: ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರ ತಾಯಿ ಸುಶೀಲಮ್ಮ ರವರು  ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಅವರಿಗೆ 85 ವರ್ಷ ವಯಸ್ಸಾಗಿತ್ತು

Home add -Advt

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲರ ನೆಚ್ಚಿನ ಅಮ್ಮ ಎಂದೇ ಪರಿಚಿತರಾಗಿದ್ದ ಸುಶೀಲಮ್ಮ ಅವರು ಪುತ್ರ ಸಚಿವ ಬೈರತಿ ಸುರೇಶ್ ಮತ್ತು ಪುತ್ರಿ ಬಿ.ಎಸ್.ರಮಾದೇವಿ, ಮೊಮ್ಮಕ್ಕಳು ಹಾಗೂ ಅಸಂಖ್ಯಾತ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಇಂದು ಸಂಜೆ 4.30 ಕ್ಕೆ ಬೈರತಿಯಲ್ಲಿರುವ ತೋಟದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ.

Related Articles

Back to top button