Kannada NewsKarnataka NewsLatest

*ಕರ್ತವ್ಯದ ವೇಳೆ ಮೃತಪಟ್ಟ ಪವರ್ ಮ್ಯಾನ್ ಕುಟುಂಬಕ್ಕೆ 1.06 ಕೋಟಿ ರೂ. ಪರಿಹಾರ ವಿತರಣೆ*

ಪರಿಹಾರದ ಚೆಕ್ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಕೆ.ಜೆ.ಜಾರ್ಜ್

ಪ್ರಗತಿವಾಹಿನಿ ಸುದ್ದಿ: ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಸದಾ ಬದ್ಧವಾಗಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಕರ್ತವ್ಯನಿರತ ವೇಳೆ ಪ್ರಾಣ ಕಳೆದುಕೊಂಡ ಕಿರಿಯ ಪವರ್ ಮ್ಯಾನ್ ಕುಟುಂಬಕ್ಕೆ 1.06 ಕೋಟಿ ರೂ. ಪರಿಹಾರದ ಚೆಕ್ ವಿತರಿಸಿದೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಸರ್ಕಾರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶುಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜಾರ್ಜ್ ಅವರು ಇತ್ತೀಚೆಗೆ ಕರ್ತವ್ಯನಿರತದ ವೇಳೆ ಪ್ರಾಣಕಳೆದುಕೊಂಡು ಸೆಸ್ಕ್ ವ್ಯಾಪ್ತಿಯ ಪಾಂಡವಪುರ ಉಪ ವಿಭಾಗದ ಕಿರಿಯ ಪವರ್ ಮ್ಯಾನ್ ಮಹೇಶ್ (27 ವರ್ಷ) ಅವರ ಕುಟುಂಬಕ್ಕೆ 1.06 ಕೋಟಿ ರೂ.ಗಳ ಪರಿಹಾರದ ಚೆಕ್ ವಿತರಿಸಿದರು. ಮೃತ ಪವರ್ ಮ್ಯಾನ್ ಮಹೇಶ್ ಅವರ ತಂದೆ ಬೋರೇಗೌಡ ಅವರು ಪರಿಹಾರದ ಚೆಕ್ ಸ್ವೀಕರಿಸಿದರು.

ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭೆಯ ಪ್ರತಿಪಕ್ಷ‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವರಾದ ಕೆ.ಜೆ.ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು, ಮೈಸೂರು ವಿಭಾಗದ ಅಧೀಕ್ಷಕ ಇಂಜಿನಿಯರ್ ಸುನೀಲ್ ಮತ್ತಿತರರ ಇದ್ದರು.

Home add -Advt

Related Articles

Back to top button