Kannada NewsKarnataka NewsLatest

ಮುಂಬೈ ಬಳಿ ಅಪಘಾತಕ್ಕೆ ಬೆಳಗಾವಿಯ ಇಬ್ಬರು ಬಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ತೆರಳಿದ್ದ ಬೆಳಗಾವಿಯ ನಾಲ್ವರ ಪೈಕಿ ಇಬ್ಬರು ವಾಪಸ್ಸಾಗುವಾಗ ಸಾವಿಗೀಡಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು ಅಪಘಾತವಾಗಿ ಇಬ್ಬರು ಸಾವಿಗೀಡಾದರೆ ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಳಗಾವಿಯ ವ್ಯಾಪಾರಸ್ಥರಾದ ಕಿರೀಟ್ ಅಲಿಯಾಸ್ ಕಾನಬಾಯಿ ಶಹಾ ಅವರ ಪತ್ನಿ ಮತ್ತು ಸಹೋದರಿ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ. ಕಿರೀಟ್ ಶಹಾ ಮತ್ತು ಅವರ ಪುತ್ರ ಸಾಗರ್ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದಾರೆ.

Home add -Advt

ಇವರು ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಗುಜರಾತ್ ಗೆ ತೆರಳಿದ್ದರು. ವಾಪಸ್ ಬರುವಾಗ ಅಪಘಾತ ಸಂಭವಿಸಿದೆ ಎಂದು ಗೊತ್ತಾಗಿದೆ. ಹೆಚ್ಚಿನ ವಿವರ ಇನ್ನಷ್ಟೆ ಬರಬೇಕಿದೆ.

Related Articles

Back to top button