Belagavi NewsBelgaum NewsKannada NewsKarnataka NewsLife StylePolitics

*ಗಾಂಜಾ ಮಟ್ಕಾ ಪ್ರಕರಣ: ಮೂವರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಪೊಲೀಸರು ಗಾಂಜಾ ಸೇವಿಸುತಿದ್ದ ಓರ್ವ ವ್ಯಕ್ತಿ ಹಾಗೂ ಮಟ್ಕಾ ಆಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಹಿರೇಬಾಗೇವಾಡಿ ಠಾಣೆ ಪೊಲೀಸ್‌ರಿಂದ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿಯ ಬಂಧನ

Home add -Advt

ಸೋಮನಾಥ ರಮೇಶ ಕಲ್ಲನ್ನವರ ಎಂಬ ಆರೋಪಿ ತಾರಿಹಾಳ ಗ್ರಾಮದ ಅಡವಿಸಿದ್ಧೇಶ್ವರ ಮಠದ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಗಾಂಜಾ ಸೇವಿಸುತ್ತಿರುವುದು ಕಂಡು ಬಂದಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸ್‌ರಿಂದ ಮಟಕಾ ದಾಳಿ: ಇಬ್ಬರ ಆರೋಪಿತರ ಬಂಧನ

ಬಸಪ್ಪ ಬಾಳಪ್ಪಾ ಕೊನಕೇರಿ (31) ಪ್ರಕಾಶ ಲಗಮಪ್ಪ ತಲ್ಲೂರಿ (28) ಎಂಬ ಆರೋಪಿಗಳು ಸೇರಿ ಬೆಳಗಾವಿ ಗ್ರಾಮೀಣ ವ್ಯಾಪ್ತಿಯ ಮಚ್ಚೆ ಗ್ರಾಮ ಹದ್ದಿಯ ಅಶೋಕ ಐರಾನ್ ಪ್ಲಾಂಟ್-3 ಎದುರುಗಡೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ಆಟದ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓಸಿ ಜುಗಾರ ಆಟದಲ್ಲಿ ತೊಡಗಿದ್ದಾಗ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ಮಾಡಿದ್ದಾರೆ.‌

ಈ ದಾಳಿಯಲ್ಲಿಯಲ್ಲಿ ಆರೋಪಿಗಳಿಂದ 2700 ರೂ ನಗದು ಹಣ ಹಾಗೂ ಎರಡು ಪ್ಲಾಸ್ಟಿಕ ಸ್ಕೂಲ ಅ.ಕಿ ರೂ-110/- ಮತ್ತು ಓಸಿ ಚೀಟಿಗಳನ್ನು ಜಪ್ತಪಡಿಸಿಕೊಂಡು ಆರೋಪಿತರ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.

ಈ ಮೇಲಿನಂತೆ 2 ಪ್ರಕರಣಗಳಲ್ಲಿ 3 ಜನ ಆರೋಪಿತರನ್ನು ಬಂಧಿಸಿ ಅವರಿಂದ ಒಟ್ಟು 2700 ರೂ. ಹಣ ಹಾಗೂ ಓಸಿ ಚೀಟಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಳಿ ಕೈಗೊಂಡ ಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Related Articles

Back to top button