Kannada NewsKarnataka NewsLatest

*ಭರ್ಜರಿ ಸುದ್ದಿ: ಚಿನ್ನದ ಬೆಲೆಯಲ್ಲಿ ದಾಖಲೆ ಮಟ್ಟದ ಇಳಿಕೆ*

ಪ್ರಗತಿವಾಹಿನಿ ಸುದ್ದಿ; ದೀಪಾವಳಿ ಹಬ್ಬಕ್ಕೆ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಇಂದು ಒಂದೇ ದಿನ ದಾಖಲೆ ಮಟ್ಟದ ಬೆಲೆ ಇಳಿಕೆ ಆಗಿದೆ.

ಅಕ್ಟೋಬರ್ 22 ಬುಧವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕ 12,720 ರೂಪಾಯಿ ಇದೆ. ಮಂಗಳವಾರದಿಂದ ಬುಧವಾರಕ್ಕೆ 338 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,27,200 ರೂಪಾಯಿ ಇದ್ದು ಇಂದು 3,380 ರೂ ಕುಸಿದಿದೆ.

22 ಕ್ಯಾರೆಟ್ 1 ಗ್ರಾಂ ಬೆಲೆ 11,660 ರೂಪಾಯಿ ಇದ್ದು, 10 ಗ್ರಾಂ ಬೆಲೆ 1,16,600 ರೂಪಾಯಿ ಇದೆ. 1 ಗ್ರಾಂ ನಲ್ಲಿ 310 ರೂಪಾಯಿ ಹಾಗೂ 10 ಗ್ರಾಂ3100 ರೂ ಇಳಿದಿದೆ.

ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,720 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,27,200 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button