Belagavi NewsBelgaum NewsKannada NewsKarnataka NewsLatest
*ಎಲ್ಲೆಂದರಲ್ಲಿ ನಿಂತಿರುವ ಇಂತಹ ವಾಹನಗಳು ಕಂಡುಬಂದರೆ ಚಿತ್ರ ಸಮೇತ ಮಾಹಿತಿ ನೀಡಿ*

ಪ್ರಗತಿವಾಹಿನಿ ಸುದ್ದಿ: ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಹೀಗೆ ಎಲ್ಲೆಂದರಲ್ಲಿ ತುಕ್ಕು ಹಿಡಿಯುತ್ತಾ ನಿಂತಿರುವ ಹಳೆಯ ವಾಹನಗಳನ್ನು ತೆರವುಗೊಳಿಸಲು ಬೆಳಗಾವಿ ಒಲೀಸರು ವಿಶೇಷ ಅಭಿಯಾನ ಆರಂಭಿಸಿದ್ದಾರೆ.
ಹಳೆಯ ಹಾಗೂ ಹಾಳಾಗಿರುವ ಅನೇಕ ವಾಹನಗಳು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ, ಸ್ಥಳವನ್ನು ವ್ಯರ್ಥವಾಗಿ ಆಕ್ರಮಿಸಿಕೊಳ್ಳಲಾಗಿದೆ. ಅವುಗಳನ್ನು ಪೊಲೀಸ್ ಠಾಣೆಗೆ ಸ್ಥಳಾಂತರಿಸಲು ಮತ್ತು ರಸ್ತೆಗಳನ್ನು ತೆರವುಗೊಳಿಸಲು ನಾವು ಅಭಿಯಾನ ನಡೆಸಲಿದ್ದೇವೆ.
ಬೆಳಗಾವಿ ನಾಗರಿಕರು ಇಂತಹ ವಾಹನಗಳ ಚಿತ್ರಗಳನ್ನು ನಗರ ಪೊಲೀಸರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಬಹುದು ಮತ್ತು ನಾವು ಈ ವಾಹನಗಳನ್ನು ಸ್ಥಳಾಂತರಿಸುತ್ತೇವೆ ಎಂದು ಬೆಳಗಾವಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



