*ಬೆಳಗಾವಿ ನಗರದಲ್ಲಿ ಸೈಬರ್ ವಂಚಕರ ಕಾಲ್ ಸೆಂಟರ್: ಅಮೇರಿಕಾ ಪ್ರಜೆಗಳೆ ಟಾರ್ಗೆಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ನಕಲಿ ಕಾಲ್ ಸೆಂಟರ್ ಓಪನ್ ಮಾಡಿ ಅಮೇರಿಕಾ ಜನರನ್ನು ಮಾತ್ರ ಟಾರ್ಗೇಟ್ ಮಾಡಿ ವಂಚಿಸುತ್ತಿದ್ದ 33 ಜನರ ತಂಡವನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ
ಬೆಳಗಾವಿಯ ಬಾಕ್ಸೈಟ್ ರೋಡ್ ನಲ್ಲಿರುವ ಕುಮಾರ ಹಾಲ್ ನಲ್ಲಿ ಅಂತಾರಾಷ್ಟ್ರೀಯ ಕಾಲ್ ಸೆಂಟರ್ ಕೆಲಸ ಮಾಡುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಬೆಳಗಾವಿ ನಗರ ಪೊಲೀಸರು ದಾಳಿ ಮಾಡಿ ಇಂಟರನ್ಯಾಷನಲ್ ಫ್ರಾಡ್ ಕಾಲ್ ಸೆಂಟರ್ ಸೀಜ್ ಮಾಡಿದ್ದಾರೆ.
ದಾಳಿಯ ವೇಳೆ 37 ಲ್ಯಾಪ್ ಟಾಪ್ಸ್, 37 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಅಸ್ಸಾಂ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ, ಮಹಾರಾಷ್ಟ್ರ, ಮೇಘಾಲಯ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ನಾಗಾಲ್ಯಾಂಡ್ ಸೇರಿ ವಿವಿಧ ರಾಜ್ಯಗಳ ಮತ್ತು ನೇಪಾಳದ ಒಬ್ಬ ಸೇರಿ 33 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಕುರಿತು ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು, 33 ಜನರು 11 ಬೇರೆ ಬೇರೆ ಕಥೆಗಳ ಮೂಲಕ ಜನರಿಗೆ ಮೋಸ ಮಾಡುತ್ತಿದ್ದರು. ಅಮೆರಿಕಾ ದೇಶದ ನಾಗರಿಕರಿಗೆ ವಂಚನೆ ಮಾಡುತ್ತಿದ್ದರು.
ಪ್ರಕರಣ ಕುರಿತು ಐಟಿ ಫರ್ಮ್ ಸಹಾಯ ಪಡೆದಿದ್ದೇವೆ. ಇದೊಂದು ದೊಡ್ಡ ಗ್ಯಾಂಗ್ ಇದ್ದು, ಗುಜರಾತ್, ಪಶ್ಚಿಮ ಬಂಗಾಲದಲ್ಲಿ ಇರುವ ಇಬ್ಬರು ಮಾಸ್ಟರ್ ಮೈಂಡ್ ಗಳನ್ನು ಬಂಧನ ಮಾಡಬೇಕಿದೆ. ಬರುವ ದಿನಗಳಲ್ಲಿ ಲ್ಯಾಪ್ ಟಾಪ್, ಫೋನ್ ಗಳನ್ನು ಪರಿಶೀಲನೆ ನಡೆಸಿ, ಎಷ್ಟು ಜನರಿಗೆ ಮೋಸ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ.
ಐಡೆಂಟೆಟಿ ಚೆಕ್ ಮತ್ತು ಚೀಟಿಂಗ್ ಬೈ ಪರ್ಸೂಲೇಶನ್ 66(ಎ), 66(ಬಿ), 75, 77, 48&49, 42 ಸೆಕ್ಷನ್ ಅಡಿಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೊಂದು ಸಂಘಟಿತ ಅಪರಾಧ ಆಗಿದೆ. 33 ಜನರಲ್ಲಿ ಪ್ರತಿಯೊಬ್ಬರು ಒಂದು ದಿನಕ್ಕೆ 100 ಕಾಲ್ ಮಾಡುತ್ತಿದ್ದರು. ಹಾಗಾಗಿ, ಮುಂದೆ ಹೆಚ್ಚು ಜನರಿಗೆ ಆಗುವ ಮೋಸ ತಡೆಗಟ್ಟಿದ್ದೇವೆ ಎಂದರು.
ಪ್ರಾಥಮಿಕ ಮಾಹಿತಿ ಪ್ರಕಾರ 18-45 ಸಾವಿರವರೆಗೆ ವೇತನ ಕೊಡುತ್ತಿದ್ದರು. ಮಾರ್ಚ್ ತಿಂಗಳಿನಿಂದ ಇವರಿಗೆ ವೇತನ ಕೊಡಲು ಶುರು ಮಾಡಿದ್ದಾರೆ. ಅದೇರೀತಿ ಬಂಧನ ಆಗಿರುವ ಆರೋಪಿಗಳು ಹೇಳುವ ಪ್ರಕಾರ ಇವರಿಗಿಂತ ಮೊದಲು ಒಂದು ಬ್ಯಾಚ್ ಕೆಲಸ ಮಾಡಿ ಹೋಗಿದೆ. ಕೆಲಸ ಮಾಡುವವರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡುತ್ತೇವೆ ಅಂತಾ ಹೇಳಿದ್ದರು.
ಹವಾಲಾ ಮುಖಾಂತರ ಹಣ ವರ್ಗಾವಣೆ ಆಗಿರಬಹುದು. ಹೆಚ್ಚಿನ ತನಿಖೆಯಲ್ಲಿ ಸಿಐಡಿ ಅಧಿಕಾರಿಗಳ ಸಹಾಯವನ್ನು ಪಡೆದುಕೊಳ್ಳುತ್ತೇವೆ. ಅಮೇರಿಕಾದ ಅಧಿಕಾರಿಗಳನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ ಎಂದರು.




