CrimeKannada NewsKarnataka NewsLatestNationalPoliticsTravel
*ಇವರೇ ನೋಡಿ ಅಜೀತ ಪವಾರ ಪ್ರಯಾಣಿಸುತ್ತಿದ್ದ ವಿಮಾನದ ಕ್ಯಾಪ್ಟನ್*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜೀತ ಪವಾರ ಸೇರಿದಂತೆ ಐವರು ಮೃತಪಟ್ಟಿದ್ದು, ಅದರಲ್ಲಿ ಕ್ಯಾಪ್ಟನ್ ಶಾಂಭವಿ ಪಾಠಕ ಕೂಡ ಒಬ್ಬರು
ಅಪಘಾತಕ್ಕೀಡಾದ ‘ಲಿಯರ್ಜೆಟ್ 45’ (Learjet 45) ಎಂಬ ಸಣ್ಣ ವಿಮಾನದ ಕಾರ್ಯಾಚರಣೆ ನಡೆಸುವ ದೆಹಲಿ ಮೂಲದ ‘ವಿಎಸ್ಆರ್ ವೆಂಚರ್ಸ್’ನಲ್ಲಿ ಶಾಂಭವಿ ಪಾಠಕ್ ಅವರು ಪ್ರಥಮ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಶಾಂಭವಿ ಪಾಠಕ್ ಅವರು ಏರ್ ಫೋರ್ಸ್ ಬಾಲ್ ಭಾರತಿ ಶಾಲೆಯಲ್ಲಿ ಓದಿದ್ದು 2016 ಮತ್ತು 2018 ರ ನಡುವೆ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಅವರು ನ್ಯೂಜಿಲೆಂಡ್ ಇಂಟರ್ನ್ಯಾಷನಲ್ ಕಮರ್ಷಿಯಲ್ ಪೈಲಟ್ ಅಕಾಡೆಮಿಯಲ್ಲಿ ಕಮರ್ಷಿಯಲ್ ಪೈಲಟ್ ಮತ್ತು ಫೈಟ್ ಕ್ರೂ ತರಬೇತಿಯನ್ನು ಪಡೆದರು.
ನಂತರ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಏರೋನಾಟಿಕ್ಸ್ ಏವಿಯೇಷನ್ ಮತ್ತು ಏರೋಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಬಿಎಸ್ಸಿ ಪದವಿಯನ್ನು ಪಡೆದಿದ್ದರು.



