*ಕೇಂದ್ರ ಬಜೆಟ್ ಪ್ರಗತಿದಾಯಕ: ಜೊಲ್ಲೆ ದಂಪತಿ ಸ್ವಾಗತ*
ವಿಕಸಿತ ಭಾರತ ನಿರ್ಮಾಣದೆಡೆಗೆ ಸಮರ್ಥ ಕೇಂದ್ರದ ಬಜೆಟ್ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಭಿಮತ.*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಅತ್ಯಂತ ಸಮರ್ಥ, ಸಮೃದ್ಧ ಹಾಗೂ ಸರ್ವಕ್ಷೇತ್ರಗಳಿಗೂ ಶಕ್ತಿ ನೀಡುವ ಬಜೆಟ್ ಮಂಡಿಸಿರುವ ಕೇಂದ್ರ ವಿತ್ತ ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರಿಗೆ ಹಾಗೂ ಪ್ರಧಾನಿಗಳಾದ ನರೇಂದ್ರ ಮೋದಿ ಅವರಿಗೆ ದೇಶದ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.
ವಿಶ್ವದಲ್ಲಿ ಭಾರತವನ್ನು ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ, ದೇಶದಲ್ಲಿ ತಯಾರಿಕಾ ವಲಯಕ್ಕೆ, ಸೆಮಿಕಂಡಕ್ಟರ್ ವಲಯಕ್ಕೆ, AI ವಲಯಕ್ಕೆ, ಮೂಲಸೌಕರ್ಯ ವಲಯಕ್ಕೆ, ಕೃಷಿ ಕ್ಷೇತ್ರಕ್ಕೆ ಹಾಗೂ ಮೆಡಿಕಲ್ ಹಬ್ ನಿರ್ಮಾಣದೊಂದಿಗೆ ವೈದ್ಯಕೀಯ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿರುವುದು ಸಂತಸದ ಸಂಗತಿ ಎಂದಿದ್ದಾರೆ.
*2026ರ ಬಜೆಟ್‌ನಲ್ಲಿ ನಾರಿ ಶಕ್ತಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದೊಡ್ಡ ಉಡುಗೊರೆ- ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ.*
ಒಂಬತ್ತನೇ ಬಾರಿ ದಾಖಲೆಯಾಗಿ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಮಂಡಿಸಲಾದ ಕೇಂದ್ರ ಬಜೆಟ್ 2026 ಜನಪರ, ಭವಿಷ್ಯನಿರ್ದೇಶಿತ ಹಾಗೂ #ViksitBharat ಕನಸನ್ನು ಸಾಕಾರಗೊಳಿಸುವ ಬಲಿಷ್ಠ ಬಜೆಟ್ ಆಗಿದೆ ಎಂದು ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಹೇಲಿದ್ದಾರೆ.
ಲಖ್‌ಪತಿ ದೀದಿ: 3 ಕೋಟಿ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ.
ಉದ್ಯಮ ಶಕ್ತಿ: ಮಹಿಳಾ ಉದ್ಯಮಿಗಳಿಗೆ ₹2 ಕೋಟಿ ಸಾಲ ಸೌಲಭ್ಯ.
ಸುರಕ್ಷತೆ & ಶಿಕ್ಷಣ: ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್ ನಿರ್ಮಾಣ!
ಮಹಿಳೆಯರ ಏಳಿಗೆಯೇ ದೇಶದ ಏಳಿಗೆ. ಇದು ವಿಕಸಿತ ಭಾರತದ ಸಂಕಲ್ಪ.
ರೈತರು, ಯುವಕರು ಹಾಗೂ ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಿರುವ ಈ ಬಜೆಟ್ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದೃಢವಾದ ಅಡಿಪಾಯವನ್ನು ಹಾಕಿದೆ ಎಂದಿದ್ದಾರೆ.




