*ಡಿ.ಕೆ.ಶಿವಕುಮಾರ್ ದಿಢೀರ್ ದೆಹಲಿಗೆ ಬುಲಾವ್* *ಭೇಟಿ ಮಾಡುತ್ತಿರುವ ನಾಯಕರ ಹೆಸರು ಹೇಳಲು ಆಗುವುದಿಲ್ಲ*

*ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್*
*ನಾನು ಡಿಸಿಎಂ ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷನಾಗಿ ಭೇಟಿ*
*ದೆಹಲಿ ಭೇಟಿ ಬಗ್ಗೆ ಸಿಎಂ ಅನುಮತಿ ಪಡೆಯುವೆ*
ಪ್ರಗತಿವಾಹಿನಿ ಸುದ್ದಿ, *ಬೆಂಗಳೂರು:* “ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ದೆಹಲಿ ಪ್ರವಾಸದಲ್ಲಿ ರಾಜಕಾರಣದ ಜೊತೆಗೆ ಕೇಂದ್ರ ಜಲಶಕ್ತಿ ಸಚಿವರು, ಕಾನೂನು ತಜ್ಞರನ್ನು ಭೇಟಿ ಮಾಡುತ್ತಿರುವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ದೆಹಲಿ ಪ್ರವಾಸದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.
ಬಜೆಟ್ ಸಭೆಯ ನಡುವೆ ದೆಹಲಿ ಭೇಟಿ ಬಗ್ಗೆ ಕೇಳಿದಾಗ ಹಾಗೂ ರಾಹುಲ್ ಗಾಂಧಿ ನಿಮ್ಮನ್ನು ಕರೆಯುತ್ತಿದ್ದಾರೆಯೇ ಎಂದು ಎಂದಾಗ, “ಭೇಟಿ ಮಾಡುವ ಎಲ್ಲಾ ಹೆಸರನ್ನು ಹೇಳಲು ಆಗುವುದಿಲ್ಲ. ನಿಮಗೆ ಏಕೆ ಇಷ್ಟು ಕುತೂಹಲ. ನಾನು ಉಪಮುಖ್ಯಮಂತ್ರಿ ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷ ಕೂಡ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮಾರ್ಚ್ 10 ಕ್ಕೆ 6 ವರ್ಷವಾಗುತ್ತದೆ. ನಮ್ಮ ಸಂಸದರನ್ನು, ನಾಯಕರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ನಾನು ಭೇಟಿ ಮಾಡುತ್ತಾ ಇರುತ್ತೇನೆ, ಆಗ ನನ್ನ ಕಷ್ಟ, ದುಃಖ, ದುಮ್ಮಾನ, ನಿಮ್ಮ ಸಂತೋಷ, ಬಯಕೆ ಎಲ್ಲಾ ಹೇಳುತ್ತಾ ಇರುತ್ತೇನೆ” ಎಂದರು.
ನಿಮ್ಮ ಇಲಾಖೆಗೆ ಸಂಬಂಧಿದಂತೆ ಬಜೆಟ್ ಪೂರ್ವಸಿದ್ಧತಾ ಸಭೆ ಕರೆದಿದ್ದು, ನೀವು ದೆಹಲಿ ಹೋಗುತ್ತಿದ್ದೀರಿ ಎಂದು ಕೇಳಿದಾಗ, “ನಾನು ಸಿಎಂ ಅನುಮತಿ ಪಡೆದುಕೊಳ್ಳುತ್ತಿದ್ದೇನೆ. ನೀರಾವರಿ ಇಲಾಖೆಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದು, ಮಂಗಳವಾರದ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನನಗಿಂತ ಸಿಎಂ ಅವರಿಗೆ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ಗೊತ್ತಿದೆ. ಮೇಕೆದಾಟು ಯೋಜನೆ ಬಗ್ಗೆ ಅಧಿಕಾರಿಗಳು ಭೇಟಿ ಮಾಡಿದ್ದಾರೆ” ಎಂದರು.
*I will meet party leaders who have called me to Delhi: DCM DK Shivakumar*
*Can’t disclose the names of party leaders I will meet*
*I am not just a DCM but also the KPCC President*
*I will take CM’s permission for my Delhi visit*
*Bengaluru, Feb 9*: Deputy Chief Minister DK Shivakumar today said that he was travelling to New Delhi to meet party leaders.
“I will be meeting the party leaders who have called me to Delhi. During the visit, I will also meet Union Jal Shakthi minister, legal counsels as well,” he said while talking to reporters at Vidhana Soudha about Delhi visit.
Asked if Rahul Gandhi has called him to Delhi, he said, “I can’t disclose names of all the people I will be meeting. Why are you so curious? I am not just the DCM but also the KPCC President. I complete 6 years as the KPCC President on March 10 and it is my duty to meet party MPs and party leaders. I keep meeting my party leaders and share my difficulties, sorrows, joys and aspirations.”
Asked about his Delhi visit when his department pre-budget meetings are scheduled, he said, “I will seek CM’s permission. The CM is also the Chairman of the Irrigation department and officials are also participating. CM knows more about irrigation than me. Officials will meet the CM on Mekedatu.”



