Belagavi NewsBelgaum NewsKannada NewsKarnataka NewsLatest
*ಎಪಿಎಂಸಿ ಪೊಲೀಸರ ಕಾರ್ಯಾಚರಣೆ: 13 ಬೈಕ್ ಕದ್ದಿದ್ದ ಕಳ್ಳರು ಅಂದರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಪಿಎಂಸಿ ಪೊಲೀಸ್ ಠಾಣೆ ಪೊಲೀಸರು ಬೈಕ್ ಕಳ್ಳರನ್ನು ಬಂಧಿಸಿ 5,35,000 ರೂ ಮೌಲ್ಯದ 13 ಬೈಕ್ ಜಪ್ತಿ ಮಾಡಿದ್ದಾರೆ.
ಎಪಿಎಮ್ಸಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಯು.ಎಸ್ ಅವಟಿ ಎಪಿಎಂಸಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ವಿಶೇಷ ತಂಡವನ್ನು ರಚನೆ ಮಾಡಿ, ಉಮೇಶ ಹಣಮಂತ ಬಾಗೇವಾಡಿ (33), ಮೌಲಾ ಹಸನಸಾಬ ಹಲಕರ್ಣಿ (48) ಎಂಬ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಇವರು 5,35,000 ರೂ ಬೆಲೆಯ 13 ಬೈಕ್ ಕಳ್ಳತನ ಮಾಡಿರುದು ಬೆಕಿಗೆ ಬಂದಿದೆ.

ಈ ವಿಶೇಷ ತಂಡದಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಪಿಎಸ್ಐ ಎಸ್ ಆರ್ ಮುತ್ತತ್ತಿ, ಎಎಸ್ಐ ಎ. ಪಾಟೀಲ, ಡಿ ಸಿ ಸಾಗರ, ಬಸವರಾಜ ನರಗುಂದ, ಖಾದರಸಾಬ ಖಾನಮ್ಮನವರ, ಗೋವಿಂದಪ್ಪ ಪೂಜಾರ, ರಫೀಕ ಮುಜಾವರ, ರಮೇಶ ಪಾಟೀಲ, ಆನಂದ ಪವಾರ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ರಮೇಶ ಅಕ್ಕಿ ಮತ್ತು ಮಹಾದೇವ ಖಾಶೀಧ ಇವರೆಲ್ಲರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.



