
ಪ್ರಗತಿವಾಹಿನಿ ಸುದ್ದಿ: “ಶಾಸಕರು ದೆಹಲಿಗೆ ಹೋಗುವುದೂ ಗೊತ್ತಿಲ್ಲ. ಫಾರಿನ್ ಗೆ ಹೋಗುವುದೂ ಗೊತ್ತಿಲ್ಲ. ಈ ಬಗ್ಗೆ ನನ್ನನ್ನು ಯಾರೂ ಕೇಳಿಯೂ ಇಲ್ಲ, ಈ ವಿಚಾರದಲ್ಲಿ ನಾನು ಬಾಯಿ ಹಾಕುವುದೂ ಇಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಪ್ರಸಕ್ತ ರಾಜಕೀಯ ಬೆಳಣಿಗೆಗಳು, ಶಾಸಕರು ದೆಹಲಿ ಪ್ರವಾಸ ಹೋಗುವುದಾಗಿ ಹೇಳಿರುವ ಬಗ್ಗೆ ಕೇಳಿದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೀಗೆ ಉತ್ತರಿಸಿದರು.
ನಗರದ ಚಿತ್ರಕಲಾ ಪರಿಷತ್ತಿನ ಬಳಿ ಮಾಧ್ಯಮಗಳಿಗೆ ಶನಿವಾರದಂದು ಪ್ರತಿಕ್ರಿಯೆ ನೀಡಿದರು.
ಅಣ್ಣನ ಹಣೆಬರಹದಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುವರು ಎನ್ನುವ ಸಹೋದರ ಡಿ.ಕೆ.ಸುರೇಶ್ ಅವ ಮಾತಿನ ಬಗ್ಗೆ ಕೇಳಿದಾಗ, “ಎಲ್ಲರೂ ಅದೇ ರೀತಿ ಹೇಳುತ್ತಾರೆ. ನಾನೇನು ಆ ಸುದ್ದಿಯನ್ನು ಮಾತನಾಡಿಲ್ಲವಲ್ಲ” ಎಂದು ಹೇಳಿದರು.
ನಿಮ್ಮ ಪರವಾಗಿ ಜನರು, ಬೆಂಬಲಿಗರು, ಶಾಸಕರು ಮಾತನಾಡುತ್ತಿದ್ದಾರೆ ಎಂದು ಕೇಳಿದಾಗ, “139 ಜನ ಶಾಸಕರು ಸೇರಿ ಮುಖ್ಯಮಂತ್ರಿಯವರು ನನ್ನ ಬೆಂಬಲಕ್ಕೆ ಇದ್ದೇ ಇದ್ದಾರೆ” ಎಂದು ಹೇಳಿದರು.
CM is in support of me: DCM D.K.Shivakumar
Bengaluru, Feb 28: Deputy Chief Minister DK Shivakumar today said he was not aware of MLAs going on foreign trip or to Delhi and added that he would not intervene in that.
He was replying to a question by reporters at Chitrakala Parishath on current political developments and MLAs travelling to Delhi. Asked about DK Suresh’s statement that ‘his brother would become the CM if destiny decides’, he said, “Everyone is saying the same thing. I have not said that.”
When asked about his followers, MLAs and people expressing support, the DCM said, “All the 139 MLAs including the CM are in support of me.”




