Belagavi NewsBelgaum NewsKannada NewsKarnataka NewsPolitics
*ಡಿಸಿಎಂ ಪರವಾಗಿ ನಾವಿದ್ದೇವೆ: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಆರ್ ಎಸ್‌ಎಸ್ ಬ್ಯಾನ್ ಮಾಡುತ್ತೇವೆ ಎಂದು ಯಾರೂ ಹೇಳಲಿಲ್ಲ ಎಂದು ಆರ್ ಎಸ್ಎಸ್ ಅನ್ನು ಯಾರಿಂದಲೂ ಬ್ಯಾನ್ ಮಾಡಲು ಆಗುವುದಿಲ್ಲ ಎಂಬ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಆರ್ ಎಸ್‌ಎಸ್ ಬ್ಯಾನ್ ಮಾಡುತ್ತೇವೆ ಎಂದು ಯಾರೂ ಹೇಳಲಿಲ್ಲ. ಅದನ್ನು ಯಾರೂ ಬ್ಯಾನ್ ಮಾಡೋಕೆ ಆಗಲ್ಲ. ಚಟುವಟಿಕೆಗಳ ನಿಷೇಧ ಬೇರೆ, ಇದು ಬೇರೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿರುವ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಇಂದು ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಆದರೆ ಇಂದೂ ಕೂಡ ದೆಹಲಿಯಲ್ಲೇ ಇರುತ್ತಾರೆ. ಡಿಸಿಎಂ ಪರವಾಗಿ ನಾವಿದ್ದೇವೆ. ನಾವು ಇಲ್ಲಿ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.




