
ಪ್ರಗತಿವಾಹಿನಿ ಸುದ್ದಿ: ಒಣಗಿದ ದಾಸವಾಳದ ಹೂವು ನುಂಗಿದ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಘೋರ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. 6 ತಿಂಗಳ ಮಗು ಚಿನ್ಮಯಿ ಗೌಡ ಮೃತ ಕಂದಮ್ಮ. ಸುದರ್ಶನ್ ಹಾಗೂ ನವ್ಯಾ ದಂಪತಿಯ ಎರಡನೇ ಪುತ್ರ.
ಮನೆ ಹೊಸ್ತಿಲಿನಲ್ಲಿ ಪೂಜೆಗೆ ಇಟ್ಟಿದ್ದ ದಾಸವಾಳ ಹೂವು ಒಣಗಿ ಹೋಗಿತ್ತು. ಅದನ್ನು ಮಗು ಬಾಯಿಗೆ ಹಾಕಿ ನುಂಗಿದೆ. ಪರಿಣಾಮ ಅಸ್ವಸ್ಥವಾಗಿದ್ದ ಮಗುವನ್ನು ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ. ಉಸಿರುಗಟ್ಟಿ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.




