
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೋರ್ಡ್, ಬ್ಯಾನರ್ ಗಳಲ್ಲಿ ಕರ್ನಾಟಕ ಸರ್ಕಾರದ ಆದೇಶದಂತೆ 60% ಕಡ್ಡಾಯ ಕನ್ನಡವನ್ನು ಬಳಸಬೇಕೆಂದು ಕಿತ್ತೂರು ಕರ್ನಾಟಕ ಸೇನೆ ಯುವ ಘಟಕ ರಾಜ್ಯಾದ್ಯಕ್ಷರು ಮಹೇಶ ಶಿಗೀಹಳ್ಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಇಂದು ಬೆಳಗಾವಿ ಮಾಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಲಾಯಿತು. ಬಳಿಕ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಹಲವು ವರ್ಷಗಳ ಹಿಂದೆ ಮಹಾನಗರ ಪಾಲಿಕೆಯಲ್ಲಿ MES ಆಡಳಿತವಿದ್ದಾಗ, ೮೬೫ ಹಳ್ಳಿಗಳನ್ನಾ ಮಹಾರಾಷ್ಟ್ರಕ್ಕೆ ಸೇರಿಸುವ ಗೊತ್ತುವಳಿಯನ್ನು ಮಂಡಿಸಿದ್ದರು. ಸದ್ಯ ಮಹಾನಗರ ಪಾಲಿಕೆಯಲ್ಲಿ ಕನ್ನಡಿಗ ಸದಸ್ಯರೇ ಹೆಚ್ಚಾಗಿ ಇರುವುದರಿಂದ, ಅಂದು MES ಮಂಡಿಸಿದ್ದ ಗೊತ್ತುವಳಿ ವಿರುದ್ಧ ನಿರ್ಣಯ ಮಂಡಿಸಬೇಕೆಂದು ಕೂಡ ಹೋರಾಟ ನಡೆಸಲಾಯಿತು.
ಪ್ರತಿಭಟನೆಯ ನಂತರ ಮಹಾನಗರ ಪಾಲಿಕೆಯ ಕಮಿಷನರ್, ಮೇಯರ್ ಹಾಗೂ ಉಪಮೇಯರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು .
ಈ ಸಂದರ್ಬದಲ್ಲಿ ಬೆಳಗಾವಿ ಜಿಲ್ಲಾ ಅದ್ಯಕ್ಷ ಮಂಗೇಶ್ ಚನ್ನಿಕುಪ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರೇಶ್ ನಾಯಕ ,ಲಕ್ಷ್ಮಣ್ ಬಾಗಡಿ, ಕಾರ್ತಿಕ ಪಾಟೀಲ, ಶಿವು ಕರಡಿಗುಡ್ಡಿ, ಸಿಂಧೂರ ನಾಗಣ್ಣವರ, ಸಚಿನ್ ಕೊಲ್ಕಾರ, ಗಿರೀಶ್ ದೊಡಮನಿ, ಶುಭಂ ತಳವಾರ, ಆನಂದ್ ಊದಿ , ಶರತ್ ಮುನವಳ್ಳಿ ಹಾಗೂ ಸಂಘಟನೆಯ ಕಾರ್ಯಕರ್ತರು ಸದಸ್ಯರು ಉಪಸ್ಥಿತರಿದ್ದರು.



