Belagavi NewsBelgaum NewsKannada NewsKarnataka News

*ದೇಶ ಕಂಡ ಅಪ್ರತಿಮ ನಾಯಕ ಜಗಜೀವನ್ ರಾಮ್ : ಡಾ. ಸಂಜೀವ ಕೆ ತಳವಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತಿಹಾಸ ಮಹಾನ್ ವ್ಯಕ್ತಿಗಳನ್ನ ನೇಮಿಸುತ್ತದೆ ಆದರೆ ಸಮಯ ಕೆಲವೇ ಕೆಲವು ವ್ಯಕ್ತಿಗಳನ್ನು ನೆನಪಿಸುತ್ತದೆ. ಅಂತಹವರಲ್ಲಿ ಡಾ. ಬಾಬು ಜಗಜೀವನ್ ರಾಮ್ ಒಬ್ಬರು ಎಂದು ಸಂಜೀವ ಕೆ ತಳವಾರ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಮಹಾನಗರ ಪಾಲಿಕೆಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ (ಏ.05) ಸಂಗಮೇಶ್ವರ ನಗರದ ಡಾ. ಬಾಬು ಜಗಜೀವನ್ ರಾಮ್ ಉದ್ಯಾನವನದಲ್ಲಿ ನಡೆದ ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಜಯಂತಿ; ಉತ್ಸವ-2026ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾನತೆ ಸಮಾಜದ ಅಡಿಪಾಯ ಎಂದು ಹೇಳಿ ಅದಕ್ಕೆ ಶ್ರಮಿಸಿ, ಕಾರ್ಮಿಕರ ಹಿತವೇ ದೇಶದ ಹಿತ ಎಂದು ಹೇಳಿದರು. ಆಹಾರ ಭದ್ರತೆ ದೇಶದ ಭದ್ರತೆ ಎಂದು ಸಂದೇಶ ನೀಡಿ ಹಗಲಿರುಳು ದುಡಿದ ದಿಮಂತ ನಾಯಕ ಡಾ. ಬಾಬು ಜಗಜೀವನ್ ರಾಮ್ ಎಂದು ಹೇಳಿದರು.

ಜಾತಿ ಪದ್ದತಿಯನ್ನು ಚಿಕ್ಕವಯಸಿನಲ್ಲಿ ವಿರೋಧಿಸಿ ಸಮಾಜದಲ್ಲಿನ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಉಪ ಪ್ರಧಾನಿ ಯಾದರೂ, ಜಾತಿ ಆಧಾರಿತವಾದ ಶುಲ್ಕವನ್ನು ವಿರೋಧಿಸಿ ಅರ್ಹತೆ ಆಧಾರದ ಮೇಲೆ ಶುಲ್ಕ ನೀಡಿ ಎಂದಂತಹ ಮಹನೀಯರು ಡಾ. ಬಾಬು ಜಗಜೀವನ್ ರಾಮ್ ಅವರು ಎಂದರು.

Home add -Advt

ಕೋಟ್ಯಂತರ ಬಡ ಜನರ ಜೀವನವನ್ನು ಬದಲಾಯಿಸಿ, ಒಂದು ಕಾಲದಲ್ಲಿ ಕುಡಿಯಲು ನೀರು ಕೂಡ ಕೊಡದಂತಹ  ವ್ಯಕ್ತಿ ಮುಂದೆ  ಹಸಿರು ಕ್ರಾಂತಿ ಹರಿಕಾರ, ರಕ್ಷಣೆ ಇಲ್ಲದ ವ್ಯವಸ್ಥೆ ಇದ್ದರೂ ಸಹ ರಕ್ಷಣಾ ಸಚಿವರು ಆದಂತಹ ಮಹಾನ್ ವ್ಯಕ್ತಿ ಡಾ.ಬಾಬು ಜಗಜೀವನ್ ರಾಮ್. 

ಸಂವಿಧಾನ ಸರಿಯಾದ ರೀತಿಯಲ್ಲಿ  ಜಾರಿಯಾಗಬೇಕು, ಸಂದರ್ಭಗಳಿಂದ ಸೋಲದೆ ಆ ಸಮಯವನ್ನೇ ನಿಮ್ಮ ಅವಕಾಶವಾಗಿ ಮಾಡಿಕೊಳ್ಳಿ ಎಂದು ಎಲ್ಲ ಜನರಿಗೆ ತಿಳಿ ಹೇಳಿದ ಡಾ.ಬಾಬು ಜಗಜೀವನ್ ರಾಮ ಅವರ ಜೀವನ, ಆದರ್ಶಗಳನ್ನು ಎಲ್ಲರೂ ಅರಿತುಕೊಳ್ಳಲು ಸಂಜೀವ ಕೆ ತಳವಾರ ಅವರು ಕರೇ ನೀಡಿದರು.

ಪೊಲೀಸ್ ಆಯುಕ್ತರಾದ ಭೂಷಣ್ ಗುಲಾಬರಾವ್ ಬೊರಸೆ ಅವರು ಮಾತನಾಡಿ, ಜಗಜೀವನ ರಾಮ್ ಎಲ್ಲಾ ಯುವಕರಿಗೆ ಸ್ಪೂರ್ತಿಯಾಗಲಿ  ಎಲ್ಲರೂ ನನ್ನವರು, ಸಮಾನತೆ, ಸಮಭಾವ ಎಂಬ ಭಾವನೆ ಇಂದ ನಾವು ಬದುಕಬೇಕು  ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಮಾತನಾಡಿ, ದೇಶ ಕಂಡ ಅಪ್ರತಿಮ ನಾಯಕರಲ್ಲಿ ಜಗಜೀವನ್ ರಾಮ್ ಅವರು ಒಬ್ಬರು, ಕಾರ್ಮಿಕರಿಗೆ ಅನೇಕ ಕಾನೂನು ಗಳನ್ನೂ ಜಾರಿಗೆ ತಂದರು, ಸಮಸ್ಯೆ ಹೇಳುವರು ನಾಯಕರಲ್ಲ ಸಮಸ್ಯೆಗಳನ್ನು ಪರಿಹರಿಸುವ ವ್ಯಕ್ತಿಗಳು ನಾಯಕರಾಗುತ್ತಾರೆ.

ಬಾಬು ಜಗಜೀವನ ರಾಮ್  ಟಾಸ್ಕ್ ಮಾಸ್ಟರ್ ದೇಶದ ಪ್ರತಿ ಸಮಸ್ಯೆ ಪರಿಹರಿಸುವರಲ್ಲಿ ನಿಂತವರು, ಆಹಾರದ ಕೊರತೆಯನ್ನು ಹೋಗಲಾಡಿಸಿ ಬೇರೆ ದೇಶಗಳಿಗೆ ರಫ್ತು ಮಾಡುವಷ್ಟು  ಬೆಳೆಸಿರುವುದಕ್ಕೆ  ಕಾರಣ ಬಾಬುಜಿ ಯವರು, ದೇಶ ಕಷ್ಟದಲ್ಲಿ ಇದಾಗ ಗಟ್ಟಿಯಾಗಿ ನಿಂತವರು ಬಾಬುಜಿ ಅವರು, ಎಂದು ಹೇಳಿದರು.

ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ್ ನಾಯಕ್ ಅವರು ಮಾತನಾಡಿ, ಆಡಳಿತ ಎಂದರೆ ಅಧಿಕಾರ ಬಯಸುವುದಲ್ಲ ಅದರಿಂದ ಎಷ್ಟು ಜನರಿಗೆ ಅನುಕೂಲ ಮಾಡಿದ್ದೀವಿ ಎಂಬುದು ಮುಖ್ಯ; ಜಗಜೀವನ ರಾಮ್ ಅವರ ಜೀವನವು ಸಾಮಾಜಿಕ ವ್ಯವಸ್ಥೆಗೆ ಅಡಿಪಾಯ ಅವರ ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು  ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಪರಶುರಾಮ ವಗ್ಗನವರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಚನ್ನಯ್ಯನವರ, ಕರ್ನಾಟಕ ನೌಕರ ಸಂಘದ ಅಧ್ಯಕ್ಷ ರಾಯಪ್ಪಗೋಳ, ಕ್ರೀಡಾ ಇಲಾಖೆಯ ಉಪ ನಿರ್ದೇಶಕರು, ಸಮಾಜದ ಮುಖಂಡರಾದ ಭೀಮರಾವ್ ಪವಾರ್, ಮಲ್ಲೇಶ  ಚೌಗಲಾ, ಮಹಾದೇವ ತಳವಾರ, ಭಾವಕಣ್ಣ ಭಂಗ್ಯಾಗೋಳ, ಸಿದ್ರಾಯಿ ಮೇತ್ರಿ, ಲಕ್ಷ್ಮಣ್ ಲಗಮಪ್ಪಗೋಳ, ಬಸವರಾಜ ಅರವಳ್ಳಿ, ಮಹಾದೇವ ಪೋಲ್, ಬಸವರಾಜ ರಾಯವಾಗೋಲ್, ಸುಧೀರ ಚೌಗಲೆ, ಸಂದೀಪ ಕೋಲಕಾರ, ಹಿರಲಾಳ ಚೌಹಾಣ್, ಜೀವನ್ ಕುರಾನೆ, ಸಾರ್ವಜನಿಕರು  ಉಪಸ್ಥಿತರಿದ್ದರು.

ಭಾವಚಿತ್ರದ ಮೆರವಣಿಗೆ

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಡಾ.ಬಾಬುಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಡಿ.ಸಿ.ಪಿ.ಶ್ರವಣ ನಾಯಕ ಅವರುಗಳು ಪುಷ್ಪಾರ್ಚನೆ ಮಾಡುವ ಮೂಲಕ‌ ಮೆರವಣಿಗೆಗೆ ಚಾಲನೆ ನೀಡಿದರು.

 ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ರಾಮನಗೌಡ ಕನ್ನೋಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಮಹಾದೇವ ಭಜಂತ್ರಿ, ಸಮಾಜದ ಮುಖಂಡರಾದ ಮಲ್ಲೇಶ  ಚೌಗಲಾ, ಮಹಾದೇವ ತಳವಾರ, ಭಾವಕಣ್ಣ ಭಂಗ್ಯಾಗೋಳ, ಕರೆಪ್ಪ ಗುಡ್ಡೆನ್ನವರ, ಸಿದ್ರಾಯಿ ಮೇತ್ರಿ, ಲಕ್ಷ್ಮಣ್ ಲಗಮಪ್ಪಗೋಳ, ಬಸವರಾಜ ಅರವಳ್ಳಿ, ಮಹಾದೇವ ಪೋಲ್, ಬಸವರಾಜ ರಾಯವಾಗೋಲ್, ಸುಧೀರ ಚೌಗಲೆ, ಸಂದೀಪ ಕೋಲಕಾರ, ಹೀರಲಾಲ್ ಚೌಹಾಣ್, ಜೀವನ್ ಕುರಾನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೆರವಣಿಗೆಯು ವಿವಿಧ ಜಾನಪದ ಕಲಾತಂಡಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭಗೊಂಡು ಸಂಗಮೇಶ್ವರ ನಗರದಲ್ಲಿನ ಡಾ.ಬಾಬು ಜಗಜೀವನರಾಮ್ ಉದ್ಯಾನವನಕ್ಕೆ ಬಂದು ಮುಕ್ತಾಯಗೊಂಡಿತು.

Related Articles

Back to top button