
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುವಕ ಯುವತಿಯರನ್ನು ಟಾರ್ಗೇಟ್ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ರಾಜು ಗಂಗಾಧರ ನಾಯಿಕ (29), ಪೃತ್ವಿರಾಜ ಆನಂದ ಕದಮ (24) ಹಾಗೂ ಪ್ರೇಮನಾಥ @ ಸೂರಜ ವಿಠಲ ಕುಂಡೆಕರ. ಈ ಮೂರು ಜನ ಆರೋಪಿತರು ಭರತೇಶ ಕಾಲೇಜ ಹತ್ತಿರ, ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುವಾಗ ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್ಐ ಹುಸೇನಸಾಬ ಕೆರೂರ ಹಾಗೂ ಸಿಬ್ಬಂದ ದಾಳಿ ಮಾಡಿದ್ದಾರೆ. ದಾಳಿ ವೇಳೆ ಆರೋಪಿತಗಳಿಂದ 29,500 ಮೌಲ್ಯದ 1 ಕೆಜಿ 190 ಗ್ರಾಮ್ ಗಾಂಜಾ ವಶಪಡಿಸಿಕೊಳ್ಳಾಗಿದೆ.
ವಿಚಾರಣೆ ವೇಳೆ ಆರೋಪಿಗಳಾದ ಯೇಸುನಂದ ಪ್ರಾನ್ಸಿಸ್ ಸೌಜ್ ಹಾಗೂ ನೌಶಾಧ ಸನದಿ ಇವರಿಂದ ಗಾಂಜಾ ತಂದಿರುವುದಾಗಿ ಬಂದಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಹಾಗಾಗಿ 5 ಜನ ಆರೋಪಿಗಳ ವಿರುದ್ಧ ಮಾರ್ಕೆಟ ಪೊಲೀಸ್ ಠಾಣೆ ಪ್ರ ಸಂಖ್ಯೆ. 70/2026 ಕಲಂ. 20(b) (ii) B ಎನ್‌ಡಿಪಿಎಸ್ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಿದ್ದು. ಪ್ರಕರಣದ ತನಿಖೆ ಮುಂದುವರೆಸಲಾಗಿದೆ.
ಮೇಲಿನ ಪ್ರಕರಣದಲ್ಲಿ ಆರೋಪಿತರನ್ನು ವಶಕ್ಕೆ ಪಡೆದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ ಪಿಎಸ್‌ಐ, ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿದ್ದಾರೆ.



