CrimeKannada NewsKarnataka News

*ಅನ್ಯ ಕೋಮಿನ ಯುವಕನಿಂದ ಹಿಂದು ಬಾಲಕಿ ಮೇಲೆ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ: ಹಿಂದೂ ಬಾಲಕಿ ಮೇಲೆ ಮುಸ್ಲಿಂ ಯುವಕ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಬಿಹಾರದ ಮೂಲದ ಮೊಹಮ್ಮದ್ ಮುನ್ನ ಎನ್ನುವ ಯುವಕ, ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಅಪ್ರಾಪ್ತೆ ಕೈಗೆ 150 ರೂಪಾಯಿ ಕೊಟ್ಟು ಎಸ್ಪೇಪ್ ಆಗಿದ್ದ ಮೊಹಮ್ಮದ್ ಮುನ್ನ ಪೊಲೀಸರು ಬಂಧಿಸಿದ್ದಾರೆ. 

ಹೊಟ್ಟೆಪಾಡಿಗಾಗಿ ದುಡಿಯಲೆಂದು ಬಿಹಾರದಿಂದ ಬೆಂಗಳೂರಿಗೆ ಬಂದು ಈ ನೀಚ ಕೃತ್ಯ ಎಸಗಿದ್ದಾನೆ.

ಇನ್ನೊಂದೆಡೆ ಕೆಲ ಸಮಯದವರೆಗೆ ಮನೆ ಬಳಿ ಬಾಲಕಿ ಕಾಣದಿದ್ದಾಗ ಆತಂಕಕ್ಕೆ ಒಳಗಾಗಿದ್ದ ಪೋಷಕರು ಅಕ್ಕಪಕ್ಕದಲ್ಲಿ ಹುಡುಕಾಡಿದ್ದಾರೆ. ಬಳಿಕ ಕೆಲ ಹೊತ್ತಿನ ನಂತರ ಬಾಲಕಿ ಮನೆಗೆ ಬಂದಿದ್ದು, ಈ ವೇಳೆ ಬಾಲಕಿ ಕೈಯಲ್ಲಿ 150 ರೂ.ಹಣ ಇರುವುದನ್ನು ಪೋಷಕರು ನೋಡಿದ್ದಾರೆ. ನಂತರ ಹಣದ ಬಗ್ಗೆ ವಿಚಾರಿಸಿದಾಗ ಬಾಲಕಿ, ಮುನ್ನನ ನೀಚ ಕೃತ್ಯವನ್ನು ಬಿಚ್ಚಿಟ್ಟಿದ್ದಾಳೆ. 

Home add -Advt

ಕೂಡಲೇ ಪೋಷಕರು ಕೂಡಲೇ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು, ಬಿಹಾರ ಮೂಲದ ಮೊಹಮ್ಮದ್ ಮುನ್ನ ಎನ್ನುವಾತನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

Related Articles

Back to top button