*ನಾಳೆ ಬೆಳಗಾವಿ ನಗರದ ಈ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ಮೇ 26 ರಂದು ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಿಂದ ಕಾಕತಿ ವೇಸ್ ರಸ್ತೆ, ಶನಿವಾರ ಕೂಟ, ಗಣಪತಿ ಗಲ್ಲಿ, ಮಾರುತಿ ಗಲ್ಲಿ. ಕಿರ್ಲೋಸ್ಕರ್ ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಾಲೇಜ್ ರಸ್ತೆ ಮೂಲಕ ಲಿಂಗರಾಜ್ ಕಾಲೇಜ್ ಮೈದಾನದವರೆಗೆ ಮೆರವಣಿಗೆ ಜರುಗಲಿದ್ದು, ಈ ವೇಳೆ ಕೇಲ ಮಾರ್ಗಗಳ ಬದಲಾವಣೆ ಮಾಡಲಾಗಿದೆ.
ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಕುರಿತು ಮೇ 26 ರಂದು ಸಾಯಂಕಾಲ 4 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಈ ಕೆಳಗಿನಂತೆ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಲು ಕೋರಲಾಗಿದೆ.
ಕಿಲ್ಲಾ ಕೆರೆ ಅಶೋಕ ಪಿಲ್ಲರ ವೃತ್ತ-ಆರ್ಟಿಓ ಸರ್ಕಲ್-ಚನ್ನಮ್ಮ ಸರ್ಕಲ್ ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪೂರ ಕಡಗೆ ಸಾಗುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಎಸ್.ಪಿ. ಆಫೀಸ್ ರಸ್ತೆ ಮಾರ್ಗವಾಗಿ ಕೃಷ್ಣದೇವರಾಯ (ಕೋಲ್ಲಾಪುರ) ವೃತ್ತ, ವಾಯ್-ಜಂಕ್ಷನ್. ಸದಾಶಿವ ನಗರ ಲಕ್ಷ್ಮೀ ಕಾಂಪ್ಲೆಕ್ಸ್, ವಿಶ್ವೇಶ್ವರಯ್ಯ ನಗರ ಬಾಚಿ ಕ್ರಾಸ್, ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ (ಮಿಲ್ಟಿ ಆಸ್ಪತ್ರೆ ಸರ್ಕಲ್), ಕೇಂದ್ರಿಯ ವಿದ್ಯಾಲಯ ನಂ.2, ಶರ್ಕತ್ ಪಾರ್ಕ. ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗುವುದು.
ಖಾನಾಪೂರ ಕಡೆಯಿಂದ ಕಾಂಗ್ರೆಸ್ ರಸ್ತೆ ಮಾರ್ಗವಾಗಿ ಬೆಳಗಾವಿ ನಗರಕ್ಕೆ ಪ್ರವೇಶಿಸುವ ವಾಹನಗಳು ಹಾಗೂ ಗೋಗಟೆ ಸರ್ಕಲ್ ರೈಲ್ವೆ ಫೈ ಓವರ್ ರಸ್ತೆ ಮುಖಾಂತರ ಬೆಳಗಾವಿ ನಗರಕ್ಕೆ ಪ್ರವೇಶಿಸುವ ವಾಹನಗಳು ಗ್ಲೋಬ್ ಥಿಯೇಟರ್ ಸರ್ಕಲ್ದಲ್ಲಿ ಎಡತಿರುವ ಪಡೆದುಕೊಂಡು ಗವಳಿ ಗಲ್ಲಿ ಕ್ರಾಸ್. ಶರ್ಕತ್ ಪಾರ್ಕ, ಕೇಂದ್ರಿಯ ವಿದ್ಯಾಲಯ ನಂ.2. ಶೌರ್ಯ ಚೌಕ (ಮಿಟ್ಟಿ ಆಸ್ಪತ್ರೆ ಸರ್ಕಲ್), ಗಾಂಧಿ ಸರ್ಕಲ್ (ಅರಗನ ತಲಾಬ), ಗಣೇಶ ಮಂದಿರ, ಹಿಂಡಲಗಾ ರಸ್ತೆ, ಹನುಮಾನ ನಗರ ಡಬಲ್ ರೋಡ್ ಮೂಲಕ ಬಾಕ್ಸಾಯಿಟ್ ರಸ್ತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಸೇರುವುದು.
ಮೆರವಣಿಗೆ ಮಾರ್ಗದಲ್ಲಿ ಎರಡು ಕ್ಯಾರೇಜ್ ವೇ ಇದ್ದ ಕಡೆಗಳಲ್ಲಿ ಒಂದು ಮಾರ್ಗವನ್ನು ಹಾಗೂ ಒಂದು ಕ್ಯಾರೇಜ್ ವೇ ಇದ್ದ ರಸ್ತೆಯನ್ನು ಸಂಪೂರ್ಣವಾಗಿ ಮೆರವಣಿಗೆಗೆ ಉಪಯೋಗಿಸಲಾಗುವುದು.
ಮೇ 26 ರಂದು ಸಾಯಂಕಾಲ 4 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶಿಸುವ ಭಾರಿ ವಾಹನಗಳನ್ನು ನಗರದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ.
ರಾಣಿ ಚನ್ನಮ್ಮ ವೃತ್ತದಿಂದ ಕಾಕತಿ ವೇಸ್ ರಸ್ತೆ, ಶನಿವಾರ ಕೂಟ, ಗಣಪತಿ ಗಲ್ಲಿ. ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ಧರ್ಮವೀರ ಸಂಭಾಜಿ ವೃತ್ತ. ಕಾಲೇಜ್ ರಸ್ತೆಯಲ್ಲಿ ಮೇ 26 ರಂದು ಸಾಯಂಕಾಲ 4 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

