Belagavi NewsBelgaum NewsCrimeKannada NewsLatest
*ಮನೆಗಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಅನಗೋಳದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ತಿಲಕವಾಡಿ ಪೊಲೀಸರು ಬಂಧಿಸಿದ್ದಾರೆ.
ಉಜ್ವಲಾ ರವಿ ಕಮ್ಮಾರ (40) ಹಾಗೂ ಶಿವಾ ಶಂಕರ ಅಪ್ಪಯನವರ, (30) ಆರೋಪಿಗಳಿಂದ ಒಟ್ಟು ಒಟ್ಟು 16,57,350 ರೂ ಮೌಲ್ಯದ 110.49 ಗ್ರಾಂ ಬಂಗಾರದ ಆಭರಣಗಳು ಜಪ್ತ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ತನಿಖಾ ತಂಡದಲ್ಲಿ ತಿಲಕವಾಡಿ ಪೊಲೀಸ್ ಇನ್ಸಪೆಕ್ಟರ್ ಪರಶುರಾಮ ಪೂಜೇರಿ, ಪಿಎಸ್ಐ ವಿಶ್ವನಾಥ ಘಂಟಾಮಠ (ಕಾ&ಸು), ಪ್ರಭಾಕರ ಡೊಳ್ಳಿ ಪಿಎಸ್ಐ (ಅ&ವಿ), ಸಿಬ್ಬಂದಿಗಳಾದ ಮಹೇಶ ಪಾಟೀಲ, ಎಸ್ ಎಮ್ ಕರಲಿಂಗಣ್ಣವರ, ಲಾಡಜಿಸಾಬ ಮುಲ್ತಾನಿ, ಸತೀಶ ಗಿರಿ, ಲಕ್ಷ್ಮೀ ಡೇಳಿಜ್, ಮಮತಾ ಬಿ ಜೆ ಹಾಗೂ ಟೆಕ್ನಿಕಲ್ ಸೆಲ್ ವಿಭಾಗದ ಸಿಬ್ಬಂದಿ ಜನರಾದ ರಮೇಶ ಅಕ್ಕಿ, ಮಹಾದೇವ ಖಾಸೀದ ರವರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಿದ್ದು, ಇವರ ಕಾರ್ಯ ವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.




