CrimeKarnataka NewsLatest

*ಅನೈತಿಕ ಸಂಬಂಧದ ಬಗ್ಗೆ ಬಹಿರಂಗವಾಹಿ ಮಾತನಾಡಿದ್ದ ಪತ್ನಿ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಪತಿ*

ಪ್ರಗತಿವಾಹಿನಿ ಸುದ್ದಿ: ಪತ್ನಿಯ ಅನೈತಿಕ ಸಂಬಂಧ ಹಾಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಮಲೇಷ್ಯಾದಲ್ಲಿ ಉದ್ಯೋಗ ಮಾಅಡುತ್ತಿದ್ದ ಪತಿ ಪತ್ನಿ ಅನೈತಿಕ ಸಂಬಂಧಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದಾರೆ.

ರಾಘವೇಂದ್ರ ವಾಡಕರ ಆತ್ಮಹತ್ಯೆಗೆ ಶರಣಾದವರು. ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಒಂದು ವಾರದ ಹಿಂದಷ್ಟೇ ದಾಂಡೇಲಿಗೆ ಮರಳಿದ್ದರು. ಅವರು ಮರಳುತ್ತಿದ್ದಂತೆಯೇ ಪತ್ನಿ ಮೇಘಾ ಇಬ್ಬರು ಮಕ್ಕಳೊಂದಿಗೆ ಧಾರವಾಡದ ತವರು ಮನೆಗೆ ತೆರಳಿದ್ದರು.

ರಾಘವೇಂದ್ರ ಪತ್ನಿಯನ್ನು ಮನೆಗೆ ಕರೆದರೂ ಪತ್ನಿ ಬರಲುನಿರಾಕರಿಸಿದ್ದಳು. ನಿನ್ನ ಜೊತೆ ಸಂಸಾರ ಮಾಡಲು ಇಷ್ಟವಿಲ್ಲ, ಸತ್ತು ಹೋಗು ಎಂದು ಹೇಳಿದ್ದಲ್ಲದೆ, ಬೇರೊಬ್ಬ ಪುರುಷನ ಜೊತೆಗಿನ ಫೋಟೋಗಳನ್ನು ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿದ್ದಳು. ಅಲ್ಲದೇ ತನ್ನ ಅನೈತಿಕ ಸಂಬಂಧದ ಬಗ್ಗೆ ಗಂಡನ ಬಳಿ ಬಹಿರಂಗವಾಗಿ ಹೇಳಿಕೊಂಡಿದ್ದಳು. ಇದರಿಂದ ಮಾನಸಿಕವಾಗಿ ನೊಂದಿದ್ದ ರಾಘವೇಂದ್ರ ಕೈ ಕೊಯ್ದುಕೊಂಡು ಫೋಟೋ ಕಳುಹಿಸಿದ್ದ. ಆದರೂ ಬಾರದ ಮೇಘಾ, ನೀನು ಸತ್ತರೂ ನನಗೆ ತೊಂದರೆಯಿಲ್ಲ ಎಂದು ಕ್ರೂರವಾಗಿ ಪ್ರತಿಕ್ರಿಯಿಸಿದ್ದಳು.

Home add -Advt

ಈ ಎಲ್ಲಾ ಅವಮಾನ ಮತ್ತು ಕಿರುಕುಳದ ಬಗ್ಗೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವ ರಾಘವೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ.ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button