Kannada NewsLatestNational

*ಮಧ್ಯರಾತ್ರಿ ಬಸ್ ನಿಲ್ದಾಣದಲ್ಲಿ ಸಾಮಾನ್ಯ ಮಹಿಳೆಯಂತೆ ಒಂಟಿಯಾಗಿ ನಿಂತ ಪೊಲೀಸ್ ಅಧಿಕಾರಿ; ಕಿರುಕುಳ ನೀಡಲು ಬಂದ ಪುಂಡರಿಗೆ ಬಿಗ್ ಶಾಕ್ ನೀಡ ಲೇಡಿ ಸಿಗಂ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳಾ ಸುರಕ್ಷತೆ ಬಗ್ಗೆ ಅರಿವು ಮೂಡಿಸಿ ಪುಂಡರ ಅಟ್ಟಹಾಸ ಮಟ್ಟಹಾಕಲು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕೈಗೊಂಡ ದಿಟ್ಟ ಕ್ರಮ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಹೈದರಾಬಾದ್ ನ ದಿಲ್ ಸುಖ್ ನಗರದ ಜನನಿಬಿಡ ಬಸ್ ನಿಲ್ದಾಣದಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ಮಲ್ಕಾಜ್ ಗಿರಿ ಪೊಲೀಸ್ ಕಮಿಷ್ನರ್ ಬಿ.ಸುಮತಿ ದಿಢೀರ್ ಅಂಡರ್ ಕವರ್ ಕಾರ್ಯಾಚರಣೆ ನಡೆಸಿದ್ದಾರೆ. ಬಸ್ ನಿಲ್ದಾಣದಲ್ಲಿ ಮಧ್ಯರಾತ್ರು 2:30ರ ಸುಮಾರಿಗೆ ಸಾಮಾನ್ಯ ಮಹಿಳೆಯಂತೆ ಬಟ್ಟೆ ಧರಿಸಿ ಒಬ್ಬಂಟಿಯಾಗಿ ನಿಂತಿದ್ದಾರೆ. ಹೀಗೆ ಬಸ್ ನಿಲ್ದಾಣದಲ್ಲಿ ಒಂಟಿ ಮಹಿಳೆ ನಿಂತಿರುವುದನ್ನು ಕಂಡ ಬೀದಿ ಕಾಮಣ್ಣ, ಪುಂಡರು ಸ್ಥಳಕ್ಕಾಗಮಿಸಿ ಕಿರುಕುಳ ನೀಡಲು ಶುರುಮಾಡಿದ್ದಾರೆ.

ಸಾಮಾನ್ಯ ಮಹಿಳೆ ವೇಷದಲ್ಲಿ ನಿಂತಿರುವುದು ಮಹಿಳಾ ಪೊಲೀಸ್ ಅಧಿಕಾರಿ ಎಂಬ ಅರಿವಿಲ್ಲದ ಯುವಕರ ಗುಂಫು, ಬೈಕ್ ನಲ್ಲಿ ಬಂದು ಪೊಲಿಸ್ ಅಧಿಕಾರಿಯ ಸುತ್ತುವರಿದು ಕೆಟ್ಟದಾಗಿ ಮಾತನಾಡುತ್ತಾ ತಮ್ಮ ಚಾಳಿ ಮುಂದುವರೆಸಲಾರಂಭಿಸಿದ್ದಾರೆ. ಕೆಲವರು ಅಸಭ್ಯವಾಗಿ ಪ್ರಶ್ನಿಸಿ ಪುಂಡಾಟ ಶುರುಮಾಡಿದ್ದಾರೆ. ಇದರಿಂದ ವಿಚಲಿತರಾಗದ ಮಹಿಳಾ ಅಧಿಕಾರಿ ಮಾರು ವೇಷದಲ್ಲಿದ್ದ ಎಸ್ ಐ ಹಾಗೂ ಇನ್ಸ್ ಪೆಕ್ಟರ್ ಹಾಗೂ ಇತರ ಪೊಲೀಸ್ ಸಿಬ್ಬಂದಿಗಳನ್ನು ಕರೆದಿದ್ದಾರೆ.

Home add -Advt

ತಕ್ಷಣ ಸ್ಥಳಕ್ಕಾಗಮಿಸಿದ ಮಾರುವೇಷದಲ್ಲಿದ್ದ ಪೊಲೀಸ್ ತಂಡ ಪುಂದರನ್ನು ಹೆಡೆಮುರಿಕಟ್ಟಿದೆ. ಈ ಕಾರ್ಯಾಚರಣೆಯಲ್ಲಿ ೪೦ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುಂಡ ಯುವಕರಿಗೆ ಬೈದು ಬುದ್ಧಿ ಹೇಳಿದ್ದಾರೆ.

ದಿಲ್ ಸುಖ್ ನಗರದ ಹಾಸ್ಟೆಲ್ ಗಳಿರುವ ಜಾಗದಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಮಿಷನರ್ ಸುಮತಿ ಸ್ವತಃ ತಾವೇ ಫೋಲ್ಡಿಗಿಳಿದು ಕಾರ್ಯಾಚರಣೆ ನಡೆಸಿ ಬೀದಿಕಾಮಣ್ಣರಿಗೆ ಬುದ್ಧಿ ಕಲಿಸಿದ್ದಾರೆ.

Related Articles

Back to top button