Belagavi NewsBelgaum NewsKarnataka NewsLatest

*ಗಾನಗಂಧರ್ವ ಡಾ. ರಾಜ್ ಕುಮಾರ್ ಅವರಿಗೆ ಸಮರ್ಪಿತ “ಗಾನ ವೈಭವ” ಕರೋಕೆ ಕಾರ್ಯಕ್ರಮ: ಮೇ 10ರಂದು ಬೆಳಗಾವಿಯಲ್ಲಿ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಲನಚಿತ್ರರಂಗದ ಅಮರ ಗಾನಗಂಧರ್ವ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಸ್ಮರಣಾರ್ಥ ಸುಮಧುರ ಕನ್ನಡ ಹಾಡುಗಳ ಕರೋಕೆ ಕಾರ್ಯಕ್ರಮ “ಗಾನ ವೈಭವ”ವನ್ನು ಎಸ್. ಬಿ. ಕರೋಕೆ ತಂಡ ಆಯೋಜಿಸಿದೆ.

ಈ ಸಂಗೀತ ವೈಭವ ಕಾರ್ಯಕ್ರಮವು ಮೇ 10, 2026ರಂದು ಸಂಜೆ 5 ಗಂಟೆಗೆ ನಗರದ ಲೋಕಮಾನ್ಯ ರಂಗಮಂದಿರ (ಹಳೆ ರೀಝ್ ಥಿಯೇಟರ್), ಕೊನವಾಳ ಗಲ್ಲಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ವೇಣುನಾದ ತಂಡದ ಪ್ರತಿಭಾವಂತ ಹಾಡುಗಾರರು ಮತ್ತು ಹಾಡುಗಾರ್ತಿಯರು ಡಾ. ರಾಜ್ ಕುಮಾರ್ ಅವರ ಅಮರ ಗೀತೆಗಳನ್ನು ಕರೋಕೆ ಮೂಲಕ ಪ್ರಸ್ತುತಪಡಿಸಲಿದ್ದಾರೆ.

Home add -Advt

ಕನ್ನಡ ಸಂಗೀತಾಭಿಮಾನಿಗಳಿಗೆ ಇದು ಅಪರೂಪದ ರಸದೌತಣವಾಗಲಿದೆ.

ಪ್ರವೇಶ ಉಚಿತವಾಗಿದ್ದು, ಎಲ್ಲ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

Related Articles

Back to top button