Kannada NewsLatestNational

*ಕೈದಿಯನ್ನೆ ಮದುವೆಯಾದ ಜೈಲು ಅಧೀಕ್ಷಕಿ*

ಪ್ರಗತಿವಾಹಿನಿ ಸುದ್ದಿ: ಜೈಲಿನಲ್ಲಿ ಉಪ ಜೈಲು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಅಧಿಕಾರಿ ಅದೇ ಜೈಲಿನಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳ ಕಾಲ ಜೀವಾವಧಿ ಶಿಕ್ಷೆ ಅನುಭವಿಸಿ ಹೊರಬಂದಿದ್ದ ವ್ಯಕ್ತಿಯನ್ನು ವರಿಸಿದ್ದಾರೆ. 

ಮಧ್ಯಪ್ರದೇಶದ ಸತ್ನಾ ಕೇಂದ್ರ ಕಾರಾಗೃಹದ ಜೈಲರ್ ಫಿರೋಜಾ ಖಾತುನ್ ಅವರು ಮಾಜಿ ಕೈದಿ ಧರ್ಮೇಂದ್ರ ಸಿಂಗ್ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದಾರೆ‌

2020ರಲ್ಲಿ ಧರ್ಮೇಂದ್ರ ಬಿಡುಗಡೆಯಾದ ನಂತರವೂ ಇವರ ಸಂಬಂಧ ಮುಂದುವರಿದು, ಇತ್ತೀಚೆಗೆ ಲವ್ ಕುಶ್ ನಗರದಲ್ಲಿ ಸತಿ-ಪತಿಗಳಾಗಿ ಒಂದಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಸಂಚಲನ ಮೂಡಿಸಿದ್ದು ನೆಟ್ಟಿಗರು ಈ ಘಟನೆಯನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ. 

Home add -Advt

2007ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಧರ್ಮೇಂದ್ರ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅವರು ಸತ್ನಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಅಲ್ಲಿನ ಜೈಲರ್ ಫಿರೋಜಾ ಅವರೊಂದಿಗೆ ಪರಿಚಯವಾಗಿತ್ತು

ಧರ್ಮೇಂದ್ರ ಅವರು ಸುಮಾರು 14 ವರ್ಷಗಳ ಜೈಲು ಶಿಕ್ಷೆ ಮುಗಿಸಿ 4 ವರ್ಷಗಳ ಹಿಂದೆ ಬಿಡುಗಡೆಯಾದರು. ಮೇ 5, 2026 ರಂದು ಛತ್ತರ್‌ಪುರ ಜಿಲ್ಲೆಯಲ್ಲಿ ಇಬ್ಬರೂ ಹಿಂದೂ ಸಂಪ್ರದಾಯದಂತೆ ವಿವಾಹವಾದರು

ಫಿರೋಜಾ ಮುಸ್ಲಿಂ ಮತ್ತು ಧರ್ಮೇಂದ್ರ ಹಿಂದೂ. ಹಾಗಾಗಿ ಫಿರೋಜಾ ಅವರ ಕುಟುಂಬದವರು ಮದುವೆಗೆ ಹಾಜರಾಗಿರಲಿಲ್ಲ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿಗಳು ಫಿರೋಜಾ ಅವರ ಪರವಾಗಿ ‘ಕನ್ಯಾದಾನ’ ನೆರವೇರಿಸಿದ್ದಾರೆ.

Related Articles

Back to top button