Kannada NewsKarnataka NewsLatest

*ಮಂತ್ರಾಲಯದ ರಾಯರ ಮಠದ ಬಳಿ ಸಿಲಿಂಡರ್ ಸ್ಫೋಟ*

ಪ್ರಗತಿವಾಹಿನಿ ಸುದ್ದಿ: ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠದ ಬಳಿ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ನಡೆದಿದೆ.

ಗುರು ರಾಯರ ಮಠದ ಬಳಿಯಿರುವ ನರಹರಿ ತೀರ್ಥ ವಸತಿ ಗೃಹದ ಸಮೀಪ ಕಾರ್ಮಿಕರಿಗಾಗಿ ನಿರ್ಮಿಸಲಾಗಿದ್ದ ಶೆಡ್ ನಲ್ಲಿ ಮೂರು ಸಿಲಿಂಡರ್ ಗಳು ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ.

Home add -Advt

ಸಿಲಿಂಡರ್ ಸ್ಫೋಟಕ್ಕೆ ಶೆಡ್ ತುಂಬೆಲ್ಲ ಬೆಂಕಿ ಆವರಿಸಿದ್ದು, ಧಗಧಗನೆ ಹೊತ್ತಿ ಉರಿದಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಗ್ ಶ್ರೀಮಠದಲ್ಲಿ ಟೈಲ್ಸ್ ಹಾಕುವ ಕೆಲಸಕ್ಕಾಗಿ ಉತ್ತಪ್ರದೇಶದಿಂದ ಆಗಮಿಸಿರುವ 30ಕ್ಕೂ ಹೆಚ್ಚು ಕಾರ್ಮಿಕರಿಗಾಗಿ ಶೆಡ್ ನಿರ್ಮಿಸಲಾಗಿತ್ತು. ಈ ಶೆಡ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ.

ಘಟನಾ ಸ್ಥಳಕ್ಕೆ ರಾಘವೇಂದ್ರ ಸ್ವಾಅಮಿ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಶ್ರೀಗಳು, ಕಾರ್ಮಿಕರ ಶೆಡ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.


Related Articles

Back to top button