Belagavi NewsBelgaum NewsKannada NewsKarnataka NewsNational

*ಬೆಳಗಾವಿ ಟು ಮುಂಬೈ: ಕಳ್ಳತನವಾದ ಕಾರು 24 ಗಂಟೆಯಲ್ಲೆ ಪತ್ತೆ ಹಚ್ಚಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ 29,00,000 ಲಕ್ಷ ರೂ ಮೌಲ್ಯದ ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರೀಯಾಂಕಾ ಚೇತನ ಅಜರೇಕರ ಅವರು ತಮ್ಮ ಕಾರು ಕಳ್ಳತನವಾದ ಬಗ್ಗೆ ದೂರು ನೀಡಿದರು.

Home add -Advt

ಪ್ರಕರಣವನ್ನು ಪತ್ತೆ ಹಚ್ಚಲು ತನಿಖೆ ನಡೆಸಿದ ಪೊಲೀಸರು ಕಳ್ಳತನವಾದ ಕಾರನ್ನು ಮಹಾರಾಷ್ಟ್ರದ ಮುಂಬೈನಿಂದ 24 ಗಂಟೆಯಲ್ಲಿ ಪತ್ತೆ ಮಾಡಿದ್ದಾರೆ.

ಅಲ್ಲದೇ ಧಾರವಾಡ ಸಬ್ ಅರ್ಬನ ಪೊಲೀಸ್ ಠಾಣೆಯಲ್ಲಿ ಕಳ್ಳತನವಾದ ಹುಂಡೈ ಕಂಪನಿಯ ಕಾರನ್ನು ಸಹ ಪತ್ತೆ ಮಾಡಪಾಗಿದೆ. ಈ ಎರಡು ಕಾರಗಳನ್ನು ಕಳ್ಳತನ ಮಾಡಿದ ಆರೋಪಿತರು ಎರಡು ಕಾರಗಳನ್ನು ಬಿಟ್ಟು ಪರಾರಿಯಾಗಿದ್ದು ಅವರನ್ನು ಪತ್ತೆ ಮಾಡುವ ತನಿಖೆಯ ಕೆಲಸ ಮುಂದುವರೆದಿದೆ. ಈ ಎರಡು ಕಾರುಗಳ ಮೌಲ್ಯ 29,00,000 ರೂ ಎಂದು ಅಂದಾಜಿಸಲಾಗಿದೆ. 

Related Articles

Back to top button