*ಬೆಂಗಳೂರು ನಾಗರಿಕರಿಗೆ ಗುಡ್ ನ್ಯೂಸ್: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಭೂ ಗ್ಯಾರಂಟಿಯ ಬಂಪರ್ ಘೋಷಣೆ

ಪ್ರಗತಿವಾಹಿನಿ ಸುದ್ದಿ: “ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾದ ‘ಭೂ ಗ್ಯಾರಂಟಿ’ ಮೂಲಕ ಬೆಂಗಳೂರು ನಾಗರಿಕರಿಗೆ ‘ಇ’ ಖಾತಾ ವಿತರಣೆ, ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15 ಕ್ಕೆ ಹೆಚ್ಚಳ, 100 ದಿನದಲ್ಲಿ ‘ಎ’ ಯಿಂದ ‘ಬಿ’ ಖಾತಾ ಶುಲ್ಕ ಪಾವತಿಸಿದರೆ ಶೇ. 60 ರಷ್ಟು ರಿಯಾಯಿತಿ, ಶಿವರಾಂ ಕಾರಂತ ಬಡಾವಣೆಯ ಭೂ ಮಾಲೀಕರಿಗೆ 18 ಸಾವಿರ ನಿವೇಶನ ಹಂಚಿಕೆ, ʼಗ್ರೀನ್ ಬೆಂಗಳೂರುʼ ಕಾರ್ಯಕ್ರಮ, ಬಿಡಿಎ ಮನೆಗಳ ಮಾರಾಟ ಸೇರಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ನಾಗರಿಕರಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಬಂಪರ್ ಕೊಡುಗೆಯಾಗಿ ಘೋಷಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೇಂದ್ರ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಬೆಂಗಳೂರು ಅನೇಕ ನಾಗರಿಕಸ್ನೇಹಿ ಘೋಷಣೆಗಳನ್ನು ಮಾಡಿದರು.
“ಬೆಂಗಳೂರು ಅಭಿವೃದ್ದಿಗೆ ಸುಮಾರು 150 ಯೋಜನೆಗಳಿದ್ದು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈ ಬಗ್ಗೆ ಪ್ರತ್ಯೇಕ ಮಾಹಿತಿ ನೀಡಲಾಗುವುದು. ಮೊದಲಿಗೆ ‘ನನ್ನ ಖಾತೆ, ನನ್ನ ಹಕ್ಕು’ ಅಭಿಯಾನ ಮೂರು ತಿಂಗಳ ಕಾಲ ಶನಿವಾರ ನಡೆಯಲಿದೆ. “ಪ್ರತಿ ಶನಿವಾರ ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ತಲಾ 10 ರಂತೆ 50 ಸ್ಥಳಗಳಲ್ಲಿ ಈ ಅಭಿಯಾನ (ಇ-ಖಾತಾ ಸಿಟಿಜನ್ ಓಪನ್ ಹೌಸ್) ಕಾರ್ಯಕ್ರಮ ನಡೆಯಲಿದೆ. ಮೇ 16 ರಿಂದ ಇದಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 10 ಕ್ಕೆ ಪ್ರಾರಂಭವಾಗಿ ಸಂಜೆವರೆಗೆ ನಡೆಯುವ ಈ ಅಭಿಯಾನದ ಸ್ಥಳಗಳನ್ನು ಮುಂಚಿತವಾಗಿ ತಿಳಿಸಲಾಗುವುದು” ಎಂದರು.
ʼಭೂ ಗ್ಯಾರಂಟಿ; ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತ ಡಿಜಿಟಲ್ ಆಸ್ತಿ ಹಕ್ಕು
“ನಾವು ಜಾರಿಗೆ ತಂದಿರುವ ‘ಇ’ ಖಾತಾ ಆಂದೋಲನ ಭಾರತದ ಅತಿದೊಡ್ಡ ಸಮಗ್ರ ಡಿಜಿಟಲ್ ನಗರ ಆಸ್ತಿ ದಾಖಲೆ ವ್ಯವಸ್ಥೆಯಾಗಿದ್ದು , 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಆನ್ಲೈನ್ ಮೂಲಕ ನೇರವಾಗಿ ನಾಗರಿಕರ ಕೈಗೆ ತಲುಪಿಸಿದೆ. ಹಳೆಯ, ಅಸ್ಪಷ್ಟ ಹಾಗೂ ಕೈಪಿಡಿ ವ್ಯವಸ್ಥೆಯನ್ನು https://BBMPeAasthi.karnataka.gov.in ರಲ್ಲಿ ಪಡೆದುಕೊಳ್ಳಬಹುದು” ಎಂದರು.
“ನಗರದಲ್ಲಿ ದಾಖಲೆಗಳು ಸರಿ ಇರುವ ಸುಮಾರು 16 ಲಕ್ಷ ‘ಎ’ ಖಾತೆಗಳಿವೆ. 7 ಲಕ್ಷ ‘ಬಿ’ ಖಾತೆಗಳಿವೆ. “ಭೂ ಗ್ಯಾರಂಟಿ”ಮೂಲಕ ಬೆಂಗಳೂರಿನ ಪ್ರತಿಯೊಬ್ಬ ನೈಜ ಆಸ್ತಿ ಮಾಲೀಕರಿಗೂ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಎಲ್ಲೆಡೆಯೂ ಲಭ್ಯವಾಗುವ ಡಿಜಿಟಲ್ ಆಸ್ತಿ ದಾಖಲೆಗಳನ್ನು ಒದಗಿಸಲಾಗುವುದು. ಇದನ್ನು ಪಾರದರ್ಶಕ, ಸುರಕ್ಷಿತ ಹಾಗೂ ನಾಗರಿಕ ಕೇಂದ್ರಿತ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಲಾಗಿದೆ” ಎಂದರು.
100 ದಿನಗಳಲ್ಲಿ ಶುಲ್ಕ ಪಾವತಿ ಮಾಡಿದರೆ ಶೇ.60 ರಷ್ಟು ರಿಯಾಯಿತಿ
‘ಬಿ’ ಖಾತೆಯಿಂದ ‘ಎ’ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದವರು ದಾಖಲೆಗಳನ್ನು ಸರಿಯಾಗಿ ನೀಡಿದ್ದರೆ ಈಗ ಗೈಡೆನ್ಸ್ ವ್ಯಾಲ್ಯೂನ ಶೇ. 5 ರಷ್ಟನ್ನು ಕಟ್ಟಬೇಕಿದೆ. ಆದರೆ 100 ದಿನಗಳ ಒಳಗಾಗಿ ಶುಲ್ಕ ಪಾವತಿಸಿದರೆ ಶೇ. 2 ರಷ್ಟು ಕಟ್ಟಿದರೆ ಸಾಕು. ಅಂದರೆ ಶೇ.60 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ 1 ಕೋಟಿ ಆಸ್ತಿಯ ಬೆಲೆ ಇದ್ದರೆ 5 ಲಕ್ಷ ಶುಲ್ಕ ಪಾವತಿ ಮಾಡಬೇಕಿತ್ತು. ಈಗ 2 ಲಕ್ಷ ಕಟ್ಟಿದರೆ ಸಾಕು. ಇದರಿಂದ 7 ಲಕ್ಷ ಆಸ್ತಿ ಮಾಲೀಕರಿಗೆ ಉಪಯೋಗವಾಗಲಿದೆ” ಎಂದರು.
“100 ದಿನಗಳಲ್ಲಿ ಇದರ ಉಪಯೋಗ ಪಡೆಯಲಿಲ್ಲ ಎಂದರೆ ನಂತರ ಶೇ.5 ರಷ್ಟೇ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಪ್ರತಿಯೊಂದು ಆಸ್ತಿ ದಾಖಲೆಗಳಲ್ಲಿ ಜಿಪಿಎಸ್, ಮಾಲೀಕರ ಫೋಟೋ ಇರುತ್ತದೆ. ಒಂದೇ ಒಂದು ರೂಪಾಯಿ ಲಂಚ ಇಲ್ಲದಂತೆ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಯವರು, ಅಧಿಕಾರಿಗಳು ಇದರ ಜವಾಬ್ದಾರಿ ಹೊತ್ತಿರುತ್ತಾರೆ. ಜೊತೆಗೆ ಆನ್ ಲೈನ್ ಅಲ್ಲೂ ಡೌನ್ ಲೋಡ್ ಮಾಡಿಕೊಳ್ಳಬಹುದು” ಎಂದರು.
“ಈ ಯೋಜನೆ ಬಗ್ಗೆ ಪ್ರತಿ ಮನೆಗೂ ಮಾಹಿತಿ ತಲುಪಿಸಲಾಗುವುದು. ವಾಟ್ಸಪ್ ಸೇರಿದಂತೆ ಇತರೇ ಮಾಧ್ಯಮಗಳ ಮೂಲಕ ಮಾಹಿತಿ ರವಾನಿಸಲಾಗುವುದು. ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಮಾಹಿತಿ ನೀಡಲಾಗುವುದು. ದಾಖಲೆಗಳು ಕನ್ನಡದಲ್ಲಿ ಇರುತ್ತವೆ” ಎಂದರು.
ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15 ಕ್ಕೆ ಹೆಚ್ಚಳ
“ಕಟ್ಟಡದ ಉಲ್ಲಂಘನೆ ವಿನಾಯಿತಿ ಮಿತಿಯನ್ನು (ಎತ್ತರ, ಎಫ್ ಎಆರ್, ಸೆಟ್ ಬ್ಯಾಕ್) ಶೇ.5 ರ ಬದಲಾಗಿ ಶೇ.15 ಕ್ಕೆ ಹೆಚ್ಚಿಸಲಾಗಿದೆ. ಶೇ.15 ರಷ್ಟು ಪ್ರಮಾಣದ ಉಲ್ಲಂಘನೆಗಳಿಗೆ ದಂಡ ಪಾವತಿಸಿಕೊಂಡು ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲು ಒಪ್ಪಿಗೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸರಬರಾಜು ಸೌಕರ್ಯ ಒದಗಿಸಬಾರದೆಂದು ಆದೇಶಿಸಿದೆ. ಈ ಸಮಸ್ಯೆ ನಿವಾರಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ” ಎಂದು ಹೇಳಿದರು.
“ನಾವು ಅಕ್ರಮ ಅಕ್ರಮ ಮಾಡುತ್ತಿಲ್ಲ. ನಗರದಲ್ಲಿ ಭೂಮಿಯ ತೀವ್ರ ಬೇಡಿಕೆಯಿಂದ ಹಾಗೂ ದಿನೇ ದಿನೇ ಬೆಳವಣಿಗೆಗಳ ಒತ್ತಡದಿಂದ ನಿವೇಶನ/ ಸ್ವತ್ತಿನ ಮಾಲೀಕರು ನಿಯಮಾನುಸಾರ ಸೆಟ್ ಬ್ಯಾಕ್ ಬಿಡದೆ ನಕ್ಷೆ ಉಲ್ಲಂಘನೆ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. 20/30, 30/40, 40/60 ಅಳತೆಯ ನಿವೇಶನಗಳಿಗೆ ಗರಿಷ್ಟ ಶೇ. 50 ರಷ್ಟು ಸೆಟ್ ಬ್ಯಾಕ್ ರಿಯಾಯಿತಿ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ. ನಾವೀಗ ಶೇ. 15 ರಷ್ಟು ವಿನಾಯಿತಿ ನೀಡಿದ್ದೇವೆ” ಎಂದರು.
2020 ರಲ್ಲಿ ಬಿಜೆಪಿ ಸರ್ಕಾರ ’38 ಡಿ’ ಎನ್ನುವ ಕಾನೂನು ಜಾರಿಗೆ ತಂದಿತ್ತು. ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಬಿಡಿಎ ಲೇಔಟ್ ಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರು. ಇದರಲ್ಲಿ 570 ಜನ ಮಾತ್ರ ಅರ್ಜಿ ಸಲ್ಲಿಸಿದ್ದರು. 200 ರಿಂದ 600 ಅಡಿವರೆಗೆ ಶೇ.10 ರಷ್ಟು, 600 ರಿಂದ 900 ಅಡಿವರೆಗೆ ಶೇ.25 ರಷ್ಟು, 1200 ರಿಂದ 2400 ವರೆಗೆ ಶೇ.40 ರಷ್ಟು, 2400 ರಿಂದ 4000 ವರೆಗೂ ಶೇ.50 ರಷ್ಟು ಗೈಡೆನ್ಸ್ ವ್ಯಾಲ್ಯೂ ಮೇಲೆ ಶುಲ್ಕ ಕಟ್ಟಲು ಕಾನೂನಿನಲ್ಲಿ ಅವಕಾಶ ಮಾಡಿದ್ದರು. ಆಗ 6 ತಿಂಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಯಾರೂ ಕೂಡ ಶುಲ್ಕ ಕಟ್ಟಲು ಮುಂದೆ ಬರಲಿಲ್ಲ. ಶುಲ್ಕ ಹೆಚ್ಚಾಯಿತು ಎಂದು ಯೋಜನೆ ಪ್ರಯೋಜನ ಪಡೆಯಲಿಲ್ಲ. ಈಗಲೂ ಈ ದಾಖಲೆಗಳು ಬರೀ ಸರ್ಕಾರಿ ದಾಖಲೆಗಳಾಗಿ ಉಳಿದುಕೊಂಡಿವೆ” ಎಂದರು.
ಈಗ ಅರ್ಜಿ ಹಾಕಲು ಜೂನ್ 15 ರಿಂದ ಒಟ್ಟು ಮೂರು ತಿಂಗಳ ಕಾಲ ಅವಕಾಶ ಕಲ್ಪಿಸಿಕೊಡಲಾಗುವುದು. ಓಟಿಎಸ್ ಜಾರಿ ಮಾಡಲಾಗುವುದು. ಮೊದಲ 100 ದಿನ ಅರ್ಜಿ ಸಲ್ಲಿಸಲು, 100 ದಿನ ಅರ್ಜಿ ಪರಿಶೀಲನೆಗೆ, ನಂತರ ಪಾವತಿಗೆ ಅವಕಾಶ ನೀಡಲಾಗವುದು. 1 ವರ್ಷ ಕಾಲಮಿತಿಯೊಳಗೆ ಅಂದರೆ 2027 ರ ಜೂನ್ ಗೆ ಈ ಯೋಜನೆ ಮುಕ್ತಾಯಗೊಳಿಸಲಾಗವುದು” ಎಂದರು.
“ಮೂರು ತಿಂಗಳ ಒಳಗೆ ಅರ್ಜಿ ಸಲ್ಲಿಸಿದವರು ಶೇ 10 ರ ಬದಲು ಶೇ. 5 ರಷ್ಟು ಮಾತ್ರ ಪಾವತಿ ಮಾಡಬಹುದು. ಅವರಿಗೆ ಶೇ.50 ರಷ್ಟು ರಿಯಾಯಿತಿ ದೊರೆಯಲಿದೆ. ಕಾನೂನಿನ ಚೌಕಟ್ಟಿನಲ್ಲಿಯೇ ರಿಯಾಯಿತಿ ನೀಡಲಾಗಿದೆ. ಗೈಡೆನ್ಸ್ ವ್ಯಾಲ್ಯೂ ಪೈಕಿ ಶೇ. 25 ಇರುವ ಕಡೆ ಶೇ 12.5, ಶೇ.40 ಇರುವ ಕಡೆ ಶೇ.20 ರಷ್ಟು, ಶೇ.50 ಇರುವ ಕಡೆ ಶೇ.25 ರಷ್ಟು ರಿಯಾಯಿತಿ ನೀಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಯವರು ಸೇರಿದಂತೆ ಸಚಿವರ ಬಳಿಯೂ ಚರ್ಚೆ ನಡೆಸಲಾಗಿದೆ” ಎಂದರು.
“ಈ ಯೋಜನೆಯ ಸೌಲಭ್ಯ ಬಳಸಿಕೊಳ್ಳದೇ ಇದ್ದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಬಿಡಿಎ 2 ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ವಶಕ್ಕೆ ಪಡೆದಿದೆ” ಎಂದರು.
ಶಿವರಾಂ ಕಾರಂತ ಬಡಾವಣೆಯ ಭೂ ಮಾಲೀಕರಿಗೆ 18 ಸಾವಿರ ನಿವೇಶನ ಹಂಚಿಕೆ
“3,052 ಭೂ ಮಾಲೀಕರು ತಮ್ಮ ಆಸ್ತಿಯನ್ನು ಶಿವರಾಂ ಕಾರಂತ ಬಡಾವಣೆಗೆ ನೀಡಿದ್ದರು. ಅನೇಕ ಆಸ್ತಿ ಮಾಲೀಕರು ಬೇರೆಯವರಿಗೆ ಆಸ್ತಿ ಮಾರಾಟ ಮಾಡಿದ್ದು ಸೇರಿದಂತೆ ಅನೇಕ ತೊಡಕುಗಳಿದ್ದವು. ಈಗ ನ್ಯಾಯಾಲಯದ ಅನುಮತಿ ಪಡೆದು 18 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲಾಗುತ್ತಿದೆ. ಮೇ 15 ನೇ ತಾರೀಕಿನಿಂದಲೇ ನಿವೇಶನ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಕೇಂದ್ರಿಯ ಇ ಗವರ್ನೆನ್ಸ್ ನಿಂದ ಸಾಫ್ಟವೇರ್ ಅಭಿವೃದ್ಧಿಪಡಿಸಿ ಅದರ ಮೂಲಕ ಹಂಚಿಕೆ ವ್ಯವಸ್ಥೆ ಮಾಡಲಾಗಿದೆ” ಎಂದರು.
“1, 2 ಎಕರೆ ಅಥವಾ ಹೆಚ್ಚು ಭೂಮಿ ಹೊಂದಿದ್ದ ಮಾಲೀಕರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ. ಒಂದೇ ಜಾಗದಲ್ಲಿ ದೊಡ್ಡ ನಿವೇಶನ ಬೇಕು ಎಂದವರಿಗೂ ಅವಕಾಶ ನೀಡುತ್ತೇವೆ ಎಂದು ಹೇಳಿದ್ದೆವು. ಇದಕ್ಕೆ 7 ಜನರು ಮಾತ್ರ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 1 ಎಕರೆ ಜಮೀನು ಇದ್ದರೆ ಒಂದೇ ಜಾಗದಲ್ಲಿ 9,583 ಚದರ ಅಡಿ ಜಾಗ ನೀಡಲಾಗುವುದು. ಇದರ ಮೂಲಕ ಎತ್ತರದ ಕಟ್ಟಡಗಳಿಗೆ ಅವಕಾಶ ಮಾಡಿಕೊಡಲು ಈ ರೀತಿ ಅನುಕೂಲ ಕಲ್ಪಿಸಲಾಗಿದೆ” ಎಂದು ವಿವರಿಸಿದರು.
15 ಲಕ್ಷ ಸಸಿಗಳನ್ನು ನೆಡುವ ʼಗ್ರೀನ್ ಬೆಂಗಳೂರುʼ ಕಾರ್ಯಕ್ರಮ
“ಬಿಡಿಎಗೆ 50 ವರ್ಷ ತುಂಬಿದೆ. ಇದರ ನೆನಪಿಗೆ ಕೆಂಪೇಗೌಡ ಜಯಂತಿಯಂದು “ಗ್ರೀನ್ ಬೆಂಗಳೂರು” ಕಾರ್ಯಕ್ರಮ ನಡೆಸಲಾಗುವುದು. ಸಂಘ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಎಲ್ಲರೂ ಸೇರಿ ಒಂದೇ ದಿನದಂದು 15 ಲಕ್ಷ ಸಸಿಗಳನ್ನು ನೆಡಲಾಗುವುದು. ಜೂನ್ 27 ಈ ಕಾರ್ಯಕ್ರಮ ನಡೆಸಲಾಗುವುದು” ಎಂದರು.
“ಬಿಜಿನೆಸ್ ಕಾರಿಡಾರ್ ನ ಮೊದಲನೇ ಹಂತಕ್ಕೆ ಶೇ.80 ರಷ್ಟು ಜನ ಒಪ್ಪಿಗೆ ನೀಡಿದ್ದಾರೆ. ಎರಡನೇ ಹಂತಕ್ಕೆ ನೋಟಿಫಿಕೇಷನ್ ನೀಡಲಾಗಿದೆ. ರೈತರೂ ಸಹ ಮುಂದಕ್ಕೆ ಬರುತ್ತಿದ್ದಾರೆ. ನಾವು ಕೊಟ್ಟಿರುವ ಪರಿಹಾರವನ್ನು ದೇಶದಲ್ಲಿ ಬೇರೆ ಯಾರೂ ಕೊಟ್ಟಿಲ್ಲ. ಹೊಸೂರು ರಸ್ತೆಯಿಂದ ಮೈಸೂರು ರಸ್ತೆಯವರೆಗೂ 33 ಕಿ.ಮೀ ಬೆಂಗಳೂರು ಬಿಜಿನೆಸ್ ಕಾರಿಡಾರ್ ಅನ್ನು ಬೆಂಗಳೂರು ದಕ್ಷಿಣದಲ್ಲಿ ನಿರ್ಮಾಣ ಮಾಡಲಾಗುವುದು. ದುಪ್ಪಟ್ಟು ಪರಿಹಾರ ನೀಡಲು ಅವಕಾಶ ಇಲ್ಲದಿದ್ದರೂ ನಾನು ಸಚಿವ ಸಂಪುಟ ಸಭೆ ಮುಂದಿಟ್ಟು, ದುಪ್ಪಟ್ಟು ಬೆಲೆ ನೀಡುತ್ತಿದ್ದೇವೆ. ಟಿಡಿಆರ್, ರಸ್ತೆ ಪಕ್ಕದಲ್ಲೇ 35% ವಾಣಿಜ್ಯ ಭೂಮಿ, ಎಫ್ ಎಆರ್, ವಸತಿ ಪ್ರದೇಶದಲ್ಲಿ 40% ಭೂಮಿ ಸೇರಿದಂತೆ ಅನೇಕ ಅವಕಾಶ ನೀಡುತ್ತಿದ್ದೇವೆ. ಅವರಿಗೆ ವಾಣಿಜ್ಯ ಜಮೀನು ನೀಡುತ್ತಿರುವುದರಿಂದ ಅವರಿಗೆ ಎಷ್ಟು ನೆರವಾಗಲಿದೆ ಎಂದರೆ ಹೇಳಲು ಸಾಧ್ಯವಿಲ್ಲ. ಈ ರೀತಿ ಪರಿಹಾರವನ್ನು ಇಡೀ ದೇಶದಲ್ಲಿ ಎಲ್ಲೂ ನೀಡಿಲ್ಲ. ಮುಂಬೈನಲ್ಲಿ ಜಮೀನು ಸ್ವಾಧೀನಕ್ಕೆ ಕೇವಲ 12.5% ಮಾತ್ರ ನೀಡಿದ್ದಾರೆ. ಇಲ್ಲಿ ಶಾಸಕರ, ಮಂತ್ರಿಗಳ ಆಸ್ತಿಗಳಿದ್ದವು ಅವರು ಸಹ ಮುಂದೆ ಬಂದಿದ್ದಾರೆ. ಅವರು ಸಹ ಒಳ್ಳೆಯ ಯೋಜನೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ನಾವು ಇದನ್ನು ಡಿನೋಟಿಫೈ ಮಾಡಲು ಸಾಧ್ಯವಿಲ್ಲ” ಎಂದರು.
1.44 ಕೋಟಿಗೆ ಬಿಡಿಎ ಮನೆ
“ವೈಟ್ ಫೀಲ್ಡ್ ನಲ್ಲಿ 1,900 ಮನೆಗಳನ್ನು ಕಟ್ಟಲಾಗಿದೆ. 1 ಬಿಎಚ್ ಕೆ ಮನೆ 760 ಚದರ ಅಡಿಯಿದೆ. ಇದನ್ನು 6,686 ರೂಪಾಯಿಗೆ ನೀಡಲಾಗುತ್ತಿದೆ. ಇದಕ್ಕೆ ಮೇ 15 ನೇ ತಾರೀಕಿನಿಂದ ಅರ್ಜಿ ಕರೆಯಲಾಗುತ್ತಿದೆ. 1,733 ಚದರ ಅಡಿಯ 3 ಬಿಎಚ್ ಕೆ ಮನೆಗಳಿಗೆ 8,309 ರಂತೆ 1.44ಕೋಟಿ ರೂಪಾಯಿಗೆ ನೀಡಲಾಗುತ್ತಿದೆ” ಎಂದರು.
“ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಎಲ್ಲಾ ಕಡೆಯೂ ಸಂಚಾರ ದಟ್ಟಣೆ ಇದ್ದೇ ಇದೆ. ಹೆಬ್ಬಾಳದ ಬಳಿ ಸ್ವಲ್ಪ ಒತ್ತಡವನ್ನು ಕಡಿಮೆ ಮಾಡಿದ್ದೇವೆ. ಇನ್ನೂ ಸರಳ ಮಾಡಬೇಕು ಎಂದು ಮುಂದುವರೆದಿದ್ದೇವೆ. ಈಗ ಕಡಿಮೆ ಅಂತರದ ಸುರಂಗ ರಸ್ತೆಯನ್ನು ಮಾಡುತ್ತಿದ್ದೇವೆ. ಹೆಬ್ಬಾಳ ಜಂಕ್ಷನ್ ಬಳಿಯಿಂದ ಕೃಷಿ ವಿವಿ ಬಳಿ ಹಾದು ಹೋಗಲಿದೆ. ಇಲ್ಲಿ ಮೂರು ಲೈನ್ ಗಳ ಕಟ್ ಅಂಡ್ ಕರ್ವ್ ಟನಲ್ ಬರಲಿದೆ. ಒಟ್ಟು ಈ ಸುರಂಗ ಮಾರ್ಗ ಆರು ಪಥಗಳನ್ನು ಹೊಂದಿರುತ್ತದೆ. ಇದು 2.2 ಕಿಮೀ ಉದ್ದ ಇರಲಿದೆ. ಈ ಯೋಜನೆಯನ್ನು ಋತ್ವಿಕ್ ಟನಲ್ ಗೆ ನೀಡಿದ್ದು 18 ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ. ಮೇಕ್ರಿ ವೃತ್ತದ ಬಳಿ 1.7 ಕಿಮೀ ಉದ್ದದ 4 ಪಥ ಹೊಂದಿರುವ ಎಲಿವೇಟೆಡ್ ಕಾಡಿಡಾರ್ ನಿರ್ಮಾಣ ಮಾಡಲಾಗುತ್ತದೆ. ಈ ತಿಂಗಳ ಕೊನೆಗೆ ಈ ಎರಡು ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಲಾಗುವುದು” ಎಂದರು.
“ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 631 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 10.77 ಕಿಮೀ ಉದ್ದದ ರಸ್ತೆಯನ್ನು ಮುಂದಿನ 15 ದಿನಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಈ ರಸ್ತೆ ನೋಡಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ” ಎಂದರು.
ಎಷ್ಟು ಆದಾಯ ಬರಲಿದೆ ಎಂದು ಕೇಳಿದಾಗ, “ನಮ್ಮ ನಿರೀಕ್ಷೆ ಗಗನಕ್ಕಿದೆ. ಈಗಾಗಲೇ 7 ಸಾವಿರ ಜನ ಶೇ.5 ರಷ್ಟು ಹಣ ಕಟ್ಟಿದ್ದಾರೆ. ಇದಕ್ಕೆ ಏನು ಪರಿಹಾರ ಹುಡಕಬೇಕು ಎಂದು ಚಿಂತಿಸಲಾಗುವುದು. ಜನಸಾಮಾನ್ಯರಿಗೆ ಉಪಯೋಗವಾಗಲಿ ಎಂದು ಈ ಯೋಜನೆ ತರಲಾಗಿದೆ” ಎಂದರು.
ಬಿಡಿಎ ಸಂಸ್ಥೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಹೇಳಿದಾಗ, “ಅದನ್ನು ನಾವು ಸರಿ ಮಾಡುತ್ತಿದ್ದೇವೆ” ಎಂದರು.
ಖಾತೆಯನ್ನು ವಿಪಕ್ಷಗಳು ಅಧಿಕಾರಕ್ಕೆ ಬಂದರೆ ಉಚಿತವಾಗಿ ಮಾಡಿಕೊಡುತ್ತೇವೆ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಬರಲೂ ಇಲ್ಲ, ಬರುವುದೂ ಇಲ್ಲ” ಎಂದರು.
ಸರ್ಕಾರಕ್ಕೆ ಜಿಬಿಎ ಚುನಾವಣೆ ಮಾಡುವ ಮನಸ್ಸಿಲ್ಲ ಎನ್ನುವ ಟೀಕೆ ಬಗ್ಗೆ ಕೇಳಿದಾಗ, “ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎಂದರು.
ಕಸದ ಟೆಂಡರ್ ನಲ್ಲಿ ಭ್ರಷ್ಟಾಚಾರವಾಗಿದೆ ಎನ್ನುವ ಬಗ್ಗೆ ಕೇಳಿದಾಗ, “ಇದು ದೊಡ್ಡ ಮಾಫಿಯಾವಿದೆ. ವಿಪಕ್ಷಗಳನ್ನು ಇವರುಗಳು ಉಪಯೋಗಿಸಿಕೊಳ್ಳುತ್ತಿದ್ದಾರೆ. 15-20 ವರ್ಷಗಳಿಂದ ಟೆಂಡರ್ ಮಾಡಲು ಬಿಟ್ಟಿಲ್ಲ. ಇದಕ್ಕೆಲ್ಲಾ ಅವಕಾಶ ನೀಡುವುದಿಲ್ಲ. ನಾವು ಕಾನೂನು ಪ್ರಕಾರ ನಡೆಯುತ್ತೇವೆ. ಅಧಿಕಾರಿಗಳು, ನನ್ನ ಮೇಲೆ ಎಲ್ಲರ ಮೇಲೂ ಆರೋಪ ಮಾಡುತ್ತಾರೆ. ಮಾಫಿಯಾಗಳು ತಿಂದು ರೂಡಿ ಮಾಡಿಕೊಂಡಿವೆ” ಎಂದರು.
DCM D K Shivakumar Makes a Bumper Announcement of ‘Bhoo Guarantee’ for Bengaluru Citizens
Bengaluru, May 13: Deputy Chief Minister D K Shivakumar today announced a bouquet of bumper offers for the citizens of Bengaluru under ‘Bhoo Guarantee’, the 6th guarantee scheme of the state government.
The bumper package includes increase of the building violation exemption limit from 5% to 15%, a 60% discount for those who pay the fees for B to A Khata conversion within 100 days, allotment of 18,000 sites to landowners of Shivaram Karanth Layout, Green Bengaluru initiative, sale of BDA homes and an e-Khata campaign.
The DCM, who is also in charge of Bengaluru Development, held a press conference at the Greater Bengaluru Authority (GBA) headquarters to announce a flurry of citizen-friendly initiatives.
“There are approximately 150 schemes for Bengaluru’s development and information about these will be provided separately in the next three to four days. First, the ‘Nanna Khata, Nanna Hakku’ campaign will run every Saturday for three months starting May 16. Every Saturday, the Citizen Open House for e-Khata will be held at 50 locations — 10 in each of the five corporation. The Open House will operate from 10 am until evening, and the locations will be announced in advance,” he said.
‘Bhoo Guarantee’: Secure Digital Property Rights for Bengaluru Citizens
“The e-Khata initiative launched by us is India’s largest comprehensive digital urban property records system, delivering over 23 lakh property records directly to citizens online. The old, ambiguous, and manual system has been replaced. The digital records can be accessed at https://BBMPeAasthi.karnataka.gov.in,” he explained.
“There are approximately 16 lakh A Khata properties with proper documentation and 7 lakh B Khata properties in the city. Through ‘Bhoo Guarantee,’ every genuine property owner in Bengaluru will be provided secure, reliable, and universally accessible digital property records. These have been converted into a transparent, secure, and citizen-centric digital format,” he said.
60% Discount if Fees Paid Within 100 Days
“Those who applied for conversion from B Khata to A Khata and submitted correct documents currently need to pay 5% of the guidance value. However, if the fee is paid within 100 days, only 2% needs to be paid — that is a 60% discount. For a property worth ₹1 crore, the fee that was ₹5 lakh now becomes just ₹2 lakh. This will benefit 7 lakh property owners,” he informed.
“If this benefit is not availed of within 100 days, regular undiscounted fees will have to be paid thereafter. Every property record will include GPS data and a photo of the owner. A system has been set up to deliver documents to the doorstep without a single rupee of bribe. The Guarantee Implementation Committee and officials will be responsible for this. Documents can also be downloaded online,” he said.
“Information about this scheme will reach every household. It will be communicated through WhatsApp and other media. Information will be provided in both English and Kannada. The documents will be in Kannada,” he added.
Building Violation Exemption Limit Increased from 5% to 15%
“The building violation exemption limit (height, FAR, setback) has been increased from 5% to 15%. Consent has been given to issue Occupancy Certificates (OC) to those who pay a fine for the violations up to 15%. The Supreme Court has ordered that electricity and water supply shall not be provided to buildings that have not obtained Occupancy Certificates. A decision on resolving this issue will be made at the next Cabinet meeting,” he said.
“We are not regularizing illegal constructions. Due to intense demand for land in the city and growing development pressures, site/property owners have built structures violating the plans without maintaining the required setbacks. The law allows up to 50% setback concessions for sites measuring 20×30, 30×40, and 40×60 feet. We are now granting a 15% exemption,” he explained.
“In 2020, the BJP government introduced a law called ’38D.’ Over 1 lakh people had built homes in BDA layouts, but only 570 of them had submitted applications. The law provided for payment of fees on guidance value — 10% for 200–600 sq ft, 25% for 600–900 sq ft, 40% for 1,200–2,400 sq ft, and 50% for 2,400–4,000 sq ft. Applications were accepted for six months, but no one came forward to pay the fees. Due to the high fees, the scheme went unused and documents remain mere government records to this day,” he said.
“Applications can now be submitted from June 15 for a total period of three months. A One-Time Settlement Scheme (OTS) will be implemented. The first 100 days are for submitting applications, the next 100 days for review, and then for payment. This scheme will conclude within one year — by June 2027,” he said.
“Those who apply within three months get a 50% discount and the concession is within the legal framework. This has been discussed with the Chief Minister and other ministers. Those who do not avail of this scheme will be subject to legal action. BDA has already seized properties worth ₹2,000 crore,” he said.
18,000 Sites to Be Allotted to Landowners of Shivarama Karanth Layout
“As many as 3,052 landowners had given their land for Shivaram Karanth Layout. There were many complications, including several owners having sold their properties to others. With court permission, 18,000 sites are now being allotted to landowners. They may take possession of sites from May 15. Software developed through the Central e-Governance system has been used for the allotment,” he said.
“Special provision has been made for owners who had 1, 2 or more acres of land. For those who wanted a single large site, we had promised to accommodate them — but only 7 people applied for this. For 1 acre of land, a single site of 9,583 sq ft would be given. This arrangement facilitates high-rise construction,” he explained.
‘Green Bengaluru’ Initiative to Plant 15 Lakh Saplings
“BDA has completed 50 years. To mark this occasion, a ‘Green Bengaluru’ program will be held on Kempegowda Jayanti. Organizations, college students, government employees, and others will collectively plant 15 lakh saplings in a single day. This programme will be held on June 27,” he said.
“80% of people have given consent for Phase 1 of the Business Corridor. Notification has been issued for Phase 2. Farmers are also coming forward. The compensation we are offering has not been given anywhere else in the country. A 33 km Bengaluru Business Corridor will be built in South Bengaluru, from Hosur Road to Mysuru Road. Even though there is no provision for double compensation, I have placed it before the Cabinet and we are providing double the value. We are offering many benefits including TDR, 35% commercial land along the road, FAR, and 40% land in residential areas. The commercial land being given to them will benefit them immensely. Such compensation has not been offered anywhere else in the country. Mumbai gave only 12.5% for land acquisition. MLAs and ministers also had properties here and they too have come forward, calling it a good scheme. We cannot de-notify this under any circumstances,” he said.
BDA Home for Rs 1.44 Crore
“1,900 homes have been built in Whitefield. A 1 BHK flat of 760 sq ft is being offered at ₹6,686 per sq ft. Applications will be invited from May 15. A 3 BHK flat of 1,733 sq ft is being offered at ₹8,309 per sq ft, totaling ₹1.44 crore,” he said.
“Traffic congestion exists in Chennai, Hyderabad, Delhi, and Mumbai too. We have eased some pressure near Hebbal and are continuing to simplify further. We are now building a short-distance tunnel road. It will pass from near Hebbal Junction to Agricultural University. A three-lane cut-and-curve tunnel will be built here, with a total of six lanes. The tunnel will be 2.2 km long. This project has been awarded to Rutvik Tunnels and must be completed within 18 months. Near Mekhri Circle, a 1.7 km elevated corridor with 4 lanes will be built. A ground-breaking ceremony for both projects will be held by the end of this month,” he informed.
“A 10.77-km road built at a cost of Rs 631 crore in Nadaprabhu Kempegowda Layout will be inaugurated within the next 15 days. Everyone will be amazed when they see this road,” he said.
When pointed out that BDA was mired in chaos, he said, “We are fixing that.”
When asked about Opposition’s claim that they would provide Khata conversions for free if they came to power, he said, “Nobody cares about that. They won’t come to power, and they won’t be coming.”
When asked about criticism that the government has no intention of holding GBA elections, he said, “Criticism dies, but work endures.”
When asked about allegations of corruption in the garbage tender, he said, “There is a big mafia here. They are using the Opposition parties. For 15–20 years, tenders have not been allowed. We will not permit this. We operate according to the law. They accuse officials, me, and everyone. The mafias have gotten used to feeding off this.”




