Kannada NewsLatestNationalPolitics

*ಸಾಮಾನ್ಯ ಜನರಿಗೆ ಶಾಕ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ*

ಪ್ರಗತಿವಾಹಿನಿ ಸುದ್ದಿ: ಅಮೆರಿಕಾ, ಇಸ್ರೇಲ್, ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ‌ ದೇಶಾದ್ಯಂತ ತೈಲ ಕಂಪನಿಗಳು ಇಂದು ಬೆಳ್ಳಂ ಬೆಳಗ್ಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ಸಾಮಾನ್ಯ ಜನರಿಗೆ ಶಾಕ್ ನೀಡಿವೆ.

ತೈಲ ಕಂಪನಿಗಳು ಪ್ರತಿ ಲೀಟರ್‌ಗೆ ₹3ರಷ್ಟು ಏರಿಸುವ ಮೂಲಕ ಗ್ರಾಹಕರಿಗೆ ಆಘಾತ ನೀಡಿವೆ. ಈ ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ ಎಂದು ಪ್ರಕಟಿಸಲಾಗಿದೆ.

ಬೆಂಗಳೂರಿನಲ್ಲಿ ನಿನ್ನೆ ಲೀಟರ್‌ಗೆ ₹102.96 ರಷ್ಟಿದ್ದ ಪೆಟ್ರೋಲ್ ಬೆಲೆ ಈಗ ₹106.17 ಕ್ಕೆ ಏರಿಕೆಯಾಗಿದೆ. ಹಾಗೆಯೇ, ಲೀಟರ್‌ಗೆ ₹90.99 ಇದ್ದ ಡೀಸೆಲ್ ಬೆಲೆ ಇಂದು ₹94.10 ಕ್ಕೆ ತಲುಪಿದೆ.

Home add -Advt

Related Articles

Back to top button