Belagavi NewsBelgaum NewsKannada NewsKarnataka News

*ಪ್ರಖ್ಯಾತ ತಬಲವಾದಕ ನಾರಾಯಣ ಗಣಚಾರಿ ಅವರ ತಂದೆ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಡಗಾವಿ ವಝೆ ಗಲ್ಲಿಯ ನಿವಾಸಿ ರಘುವೀರ ಭೀಮಾಜಿ ಗಣಾಚಾರಿ ಅವರು ವಯೋ ಸಹಜವಾದ ಕಾಯಿಲೆಯಿಂದ ಭಾನುವಾರ (ದಿನಾಂಕ 17 ಮೇ 2026ರಂದು ಮಧ್ಯಾಹ್ನ 2.30 ಗಂಟೆಗೆ) ನಿಧನರಾಗಿದ್ದಾರೆ.

ಅವರಿಗೆ 90 ವರ್ಷ ವಯಸ್ಸಾಗಿತ್ತು. 

ಅವರು ಮೂವರು ಗಂಡು ಮಕ್ಕಳು, ಒಬ್ಬ ಮಗಳು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಪ್ರಖ್ಯಾತ ತಬಲವಾದಕ ನಾರಾಯಣ ಗಣಚಾರಿ ಇವರ ಮಗನಾಗಿದ್ದಾರೆ. 

ಶಹಪುರ ಸ್ಮಶಾನದಲ್ಲಿ ಭಾನುವಾರ ಸಂಜೆ 6 ಗಂಟೆಗೆ ಅವರ ಅಂತಿಮ ಸಂಸ್ಕಾರ ಜರುಗಿತು. ರಘುವೀರ ಗಣಾಚಾರಿ ಅವರ ನಿಧನಕ್ಕೆ ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆ ಶೋಕ ವ್ಯಕ್ತಪಡಿಸಿದೆ.

Home add -Advt

Related Articles

Back to top button