*ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಿಲು ಬೀದಿಬದಿ ಅಂಗಡಿಗಳ ತೆರವು: ಸಿಎಂ ಡಿ.ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರಿನಲ್ಲಿ ಇಂದು ರೌಂಡ್ಸ್ ಮಾಡಲಿದ್ದೇವೆ. ನಾನು ಬೆಂಗಳೂರು ಮಿನಿಸ್ಟರ್ ಆಗಿದ್ದಾಗ ಎಲ್ಲಾ ಶಾಸಕರನ್ನ ಕರೆಯಿಸಿ ಬೀದಿ ವ್ಯಾಪಾರಿಗಳ ಬಗ್ಗೆ ಚರ್ಚೆ ಮಾಡಿದ್ದೇವು. ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ಶಾಸಕರ ಜೊತೆಗೆ ಸಭೆ ಮಾಡಿದ್ದೇವು. ಟ್ರಾಫಿಕ್ ಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ, ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸುವುದು ಎಲ್ಲರ ಅಭಿಪ್ರಾಯ ಆಗಿತ್ತು ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ತಿಳಿಸಿದರು.
ಬೆಳಗಾವಿಯ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿದಿಬದಿ ವ್ಯಾಪಾರಿಗೆ ನಾವು ತೊಂದರೆ ಮಾಡುತ್ತಿಲ್ಲ. ಮುಖ್ಯ ರಸ್ತೆಯಲ್ಲಿ ಇಡಲು ಅವಕಾಶ ಇಲ್ಲ. ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಕೃಷ್ಣಬೈರೇಗೌಡರು ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಅವರೊಬ್ಬರ ಮೇಲೆ ಬಿಡುವುದಲ್ಲ. ಇಂದು ಪೊಲೀಸರು, ಅಧಿಕಾರಿಗಳ ಜೊತೆಗೆ ಸಭೆ ಮಾಡುತ್ತೇವೆ. ನಾವು ನಿಗದಿ ಮಾಡಿದ ಜಾಗದಲ್ಲಿ ವ್ಯಾಪಾರ ಮಾಡಬೇಕು ಎಂದು ಡಿ.ಕೆ.ಶಿವಕುಮಾರ ಎಚ್ಚರಿಕೆ ನೀಡಿದರು.
ಜಿಬಿಎ ಚುನಾವಣೆ ಬಗ್ಗೆ ಜಿಬಿಎ ಅಧಿಕಾರಿಗಳು ಸುಪ್ರೀಂ ಕೋರ್ಟ್ ಹೋಗಿರುವುದಕ್ಕೆ ಕೋರ್ಟ್ ಅವಕಾಶ ಕೊಡಲ್ಲ ಅಂತಾ ಹೇಳಿದೆ. ಲಾಸ್ಟ್ ಆಗಸ್ಟ್ ಅಂತಾ ಹೇಳಿದೆ. ಅಧಿಕಾರಿಗಳ ಸಮಸ್ಯೆ ಇದೆ, ಹೀಗಾಗಿ ಅವರನ್ನು ಬಿಟ್ಟು ಬಿಟ್ಟಿದೀನಿ. ಅದರಲ್ಲಿ ನಾವು ಎಂಟ್ರಿಯಾಗಲ್ಲ. ಜಿಬಿಎ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಡಿ.ಕೆ.ಶಿವಕುಮಾರ ಹೇಳಿದರು.
ಸಂಪುಟ ವಿಸ್ತರಣೆಗೆ ಒತ್ತಡ ಇದೆಯಾ ಎಂಬ ವಿಚಾರಕ್ಕೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರತಿಕ್ರಿಯೆ ನೀಡಿದ್ದು, ಒತ್ತಡ ಏನಿಲ್ಲಾ, ನಮ್ಮ ನಾಯಕರು ಇವತ್ತು ಇಲ್ಲಾ ನಾಳೆ ಬರುತ್ತಾರೆ. ಬಂದ ಮೇಲೆ ಯಾವತ್ತು ಅವರ ಕರೆಯುತ್ತಾರೆ ಆಗ ನಾನು ಹೋಗುತ್ತೇನೆ ಎಂದಿದ್ದಾರೆ.
ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೋಡ ಬಿತ್ತನೆ ಬಗ್ಗೆ ಬೇಡಿಕೆ ಇದೆ. ನಮ್ಮ ಲೀಗಲ್ ಅಧಿಕಾರಿಗಳು, ಹಣಕಾಸು ಇಲಾಖೆ ಜೊತೆಗೆ ಮಾತಾಡಬೇಕು. ಶಾಸಕರೆಲ್ಲರೂ ಬಹಳ ಒತ್ತಾಯ ಮಾಡಿ ಹೇಳಿದ್ದಾರೆ. ಹೀಗಾಗಿ, ಪರಿಶೀಲನೆ ಮಾಡುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ ಸ್ಪಷ್ಟಪಡಿಸಿದರು.
ಸುವರ್ಣ ವಿಧಾನಸೌಧದಲ್ಲಿ ಒಂದು ತೀರ್ಮಾನ ತೆಗೆದುಕೊಂಡಿದ್ದೇನೆ. ಎಲ್ಲ ದೇವಸ್ಥಾನದ ಹುಂಡಿಗಳು ಹುಷಾರಾಗಿರಬೇಕು ಎಂದರು.
ಬೆಳಗಾವಿಯಲ್ಲಿ ಆರ್‌ಎಸ್‌ಎಸ್ ಸಭೆ ನಡೆಸುತ್ತಿರುವುದಕ್ಕೆ ನನಗೆ ಇನ್ನೂ ಅದರ ಬಗ್ಗೆ ಮಾಹಿತಿ ಬಂದಿಲ್ಲ. ಪೇಪರ್ ನಲ್ಲಿ ನೋಡಿದೀನಿ ಗೊತ್ತಿದೆ. ವರದಿ ಕೇಳಿದ್ದೇನೆ, ಕಾನೂನಿನಲ್ಲಿ ಏನು ಅವಕಾಶ ಇದೆ ಸಿಗುತ್ತದೆ. ಕಾನೂನಿನಲ್ಲಿ ಅವಕಾಶ ಇಲ್ಲಾ ಅಂದ್ರೇ ಸಿಗುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಮಾಡುವುದಲ್ಲ ಎಂದರು.




