Karnataka NewsLatestPolitics

*ಅಡಿಗೆ ಸಿಲಿಂಡರ್ ದರ ಏರಿಕೆ: ಪ್ರಧಾನಿ ಮೋದಿ ದೇಶದ ಜನತೆಗೆ ಊಟ ಕಡಿಮೆ ಮಾಡಿ ಎನ್ನಬಹುದೇನೋ: ಪ್ರಿಯಾಂಕ್ ಖರ್ಗೆ ಟೀಕೆ*

ಪ್ರಗತಿವಾಹಿನಿ ಸುದ್ದಿ: ಗೃಹ ಬಳಕೆ ಸಿಲಿಂಡರ್ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಮಧ್ಯಮ ವರ್ಗದ ಜನರು, ಸಾಮಾನ್ಯರ ಬದುಕು ದುಸ್ಥರವಾಗಿದೆ. ಇದೇ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಪ್ರಿಯಾಂಕ್ ಖರ್ಗೆ, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾದ ಬೆನ್ನಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆ 3 ತಿಂಗಳ ಅವಧಿಯಲ್ಲಿ ಎರಡನೇ ಬಾರಿ ₹29ರಷ್ಟು ಏರಿಕೆಯಾಗಿದೆ.

ಬಹುಶಃ 8PM ಪ್ರಧಾನಿಗಳು ಮತ್ತೊಮ್ಮೆ ಟಿವಿಯಲ್ಲಿ ಕುಳಿತು ದೇಶದ ಜನತೆಗೆ “ಕಡಿಮೆ ಊಟ ಮಾಡಿ” ಎಂಬ ಆತ್ಮನಿರ್ಬರತೆಯ ಉಚಿತ ಸಲಹೆ ನೀಡಬಹುದೇನೋ! ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಾಂಗಲ್ಯ ಕಸಿಯುತ್ತದೆ ಎಂಬ ಅತ್ಯಂತ ಕನಿಷ್ಠ ಮಟ್ಟದ ಹೇಳಿಕೆ ನೀಡಿದ್ದ ಪ್ರಧಾನಿಗಳು ಈಗ ಜನರ ಅನ್ನದ ತಟ್ಟೆಯನ್ನು ಕಸಿಯುತ್ತಿದ್ದಾರೆ. ಈ ಬೆಲೆ ಏರಿಕೆಯ ಅಚ್ಚೆ ದಿನಗಳ ಬಗ್ಗೆ ಕರ್ನಾಟಕ ಬಿಜೆಪಿ ನಾಯಕರ ಗಾಢಮೌನವು ಜನಸಾಮಾನ್ಯರೆಡೆಗೆ ಅವರಿಗಿರುವ ಮಾನಸಿಕ ಕ್ರೌರ್ಯವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

Home add -Advt

Related Articles

Back to top button