
ಪ್ರಗತಿವಾಹಿನಿ ಸುದ್ದಿ: ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರಿಯಕರನೇ ತನ್ನ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ದೊಡ್ಡಕನ್ನಹಳ್ಲಿಯಲ್ಲಿ ಈ ಘಟನೆ ನಡೆದಿದೆ. ಪ್ರಿಯಕರ ಫುರ್ಬಾ ಲೇಪ್ಸಾ ಪ್ರೇಯಸಿಯನ್ನು ಕೊಂಡವನು. ಸಿಕ್ಕಿಂ ಮೂಲದ ಐತಿ ಹಂಗ್ಮಾ ಕೊಲೆಯಾದ ಯುವತಿ.
ಡಾರ್ಜಿಲಿಂಗ್ ಮೂಲದ ಫುರ್ಬಾ ಲೇಪ್ಸಾ, ಹಾಗೂ ಸಿಕ್ಕಿಂ ಮೂಲದ ಐತಿ ಹಂಗ್ಮಾ ಕಳೆದ ಒಂದು ತಿಂಗಳ ಹಿಂದಷ್ಟೇ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಇಬ್ಬರು ಒಟ್ಟಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಪ್ರಿಯಕರ ಮದುವೆ ಮಾಡಿಕೊಳ್ಳೋಣ ಎಂದು ಹೇಳಿದ್ದನಂತೆ. ಆದರೆ ಯುವತಿ ಐತಿ, ಈಗಲೇ ಮದುವೆ ಬೇಡ ಎಂದಿದ್ದಾಳೆ. ಇಷ್ಟಕ್ಕೆ ಐತಿ ಹಗ್ಮಾ ಮೇಲೆ ಫುರ್ಬಾಗೆ ಅನುಮಾನ ಆರಂಭವಾಗಿದೆ.
ಆಕೆಗೆ ಬೇರೊಬ್ಬನ ಜೊತೆ ಸಂಬಂಧವಿದೆ ಎಂದು ಅನುಮಾನಗೊಂಡು ಜಗಳವಾಡಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೋಪದ ಬರದಲ್ಲಿ ಫುರ್ಬಾ ಚಾಕುವಿನಿಂದ ಐತಿ ಹಂಗ್ಮಾಳ ಕತ್ತಿನ ಭಾಗದಲ್ಲಿ ಇರಿದು ಕೊಲೆ ಮಾಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.



