Karnataka NewsLatestPolitics

*ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಸರಕಾರದ ಹೆಮ್ಮೆಯ ಗ್ಯಾರಂಟಿ ಯೋಜನೆಗಳಾದ “ಗೃಹಲಕ್ಷ್ಮಿ” ಮತ್ತು “ಗೃಹಜ್ಯೋತಿ” ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಕೆಲವರು ಸತ್ತವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಅಕೌಂಟ್ ತೆರೆದು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ದೃಢೀಕರಣಕ್ಕಾಗಿ, ಅವರ ಹೆಸರು, ವಿಳಾಸ, ಅಕೌಂಟ್ ನಂಬರ್ ಖಚಿತಪಡಿಸಿಕೊಳ್ಳಲು ಮತ್ತೇ ಅರ್ಜಿ ಸಲ್ಲಿಸಲು ಹೇಳಲಾಗಿದೆಯೇ ಹೊರತು ಯೋಜನೆಗಳನ್ನು ನಿಲ್ಲಿಸಲು ಅಲ್ಲ ಎಂದು ಮುಖ್ಯಮಂತ್ರಿಗಳು ಮಾಧ್ಯಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಎಲ್ಲ ಗ್ಯಾರಂಟಿ ಯೋಜನೆಗಳು ಶೇಕಡಾ ನೂರಕ್ಕೆ ನೂರರಷ್ಟು ಮುಂದುವರಿಯುತ್ತವೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸಿಎಂ ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

Guarantee schemes, including Gruha Lakshmi and Gruha Jyoti, will not be discontinued: CM D K Shivakumar

Home add -Advt

Bengaluru, June 14: Chief Minister D K Shivakumar today categorically denied discontinuing Gruha Lakshmi and Gruha Jyothi guarantee schemes of the Congress government and appealed to the public not to pay heed to rumours being spread by the Opposition.

“Gruha Lakshmi and Gruha Jyoti are the pride of the Congress government. They will not be stopped under any circumstances. The public should not listen to the false news being spread by Opposition parties in this regard,” the CM said in a statement.

“Some people have been creating fake records in the names of deceased persons and are availing the benefits of the schemes. Therefore, beneficiaries have been asked to reapply only so that their name, address, and account number can be verified and authenticated for the guarantee schemes. There is nothing more to it,” he said.

The CM categorically stated that all guarantee schemes will continue one hundred percent and that no one need be anxious.

Related Articles

Back to top button