
ಪ್ರಗತಿವಾಹಿನಿ ಸುದ್ದಿ: ಶೆಡ್ ವೊಂದರಲ್ಲಿ ದಾಖಲೆಯಿಲ್ಲದ ಬರೋಬ್ಬರಿ 3 ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದು, ಪೊಲೀಸರೇ ದಂಗಾದ ಘಟನೆ ಬೆಳಕಿಗೆ ಬಂದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಾಖಲೆ ಇಲ್ಲದ 3 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ. ಬೆಂಗಳೂರಿನ ಕುರುಬರಹಳ್ಳಿಯಲ್ಲಿರುವ ಶೇಷಾದ್ರಿಪುರಂ ಇಂಡಸ್ಟ್ರೀಸ್ ಹೆಸರಿನಲ್ಲಿರುವ ಶೆಡ್ ವೊಂದರಲ್ಲಿ ಈ ಹಣ ಪತ್ತೆಯಾಗಿದೆ.
ಜೂನ್ 2 ರಂದು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಗಸ್ತಿನಲ್ಲಿದ್ದಾಗ ಮಹಾಲಕ್ಷ್ಮೀ ಲೇಔಟ್ ಪಿಎಸ್ ಐ ರಾಕೇಶ್ ಹಾಗೂ ಸಿಬ್ಬಂದಿಗೆ ಬಾತ್ಮೀದಾರರಿಂದ ಶೆಡ್ ನಲ್ಲಿ ಹಣ ಇರುವ ಬಗ್ಗೆ ಮಾಹಿತಿ ಬಂದಿದೆ. ಕುರುಬರಹಳ್ಲಿಯ 11ನೇ ಕ್ರಾಸ್ ನಲ್ಲಿರುವ ಶೆಡ್ ಗೆ ತೆರಳಿ ಪರಿಶೀಲಿಸಿದ ಪೊಲೀಸರಿಗೆ ೪ ಬ್ಯಾಗ್ ಗಳಲ್ಲಿ 2 ಕೋಟಿ 98 ಲಕ್ಷ ಹಣ ಇರುವುದು ಪತ್ತೆಯಾಅಗಿದೆ.
ತಾವರೆಕೆರೆ ನಿವಾಸಿ ನಾಗರಾಜ್ ಎಂಬುವಾವರಿಗೆ ಸೇರಿದ ಹಣ ಇದಾಗಿದ್ದು, ಕುರುಬರಹಳ್ಳಿ ಸ್ನೇಹಿತ ವೆಂಕಟೆಶ್ ಶೆಡ್ ನಲ್ಲಿ ಇಡಲಾಗಿತ್ತು. 2,98,00,900 ರೂಪಾಯಿ ಹಣ ಇರುವುದು ಕಂಡುಬಂದಿದೆ. ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ರೆಫ್ ಐ ಆರ್ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇದು ಜಮೀನು ಮಾರಿ ಬಂದ ಹಣವಾಗಿದ್ದು, ಬ್ಯಾಂಕ್ ಗೆ ಸಾಲಕಟ್ಟಲೆಂದು ಹಣ ತಂದಿದ್ದಾಗಿ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿದ್ದ ಆಸ್ತಿ ಮಾರಿದ್ದರಿಂದ ಬಂದ ಹಣ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಆರೋಪಿಗಳಿಬ್ಬರೂ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.



