CrimeLatestNational

*ಮತ್ತೊಂದು ಪೈಶಾಚಿಕ ಕೃತ್ಯ: 13 ವರ್ಷದ ಬಾಲಕಿ ಮೇಲೆ 30 ಕಾಮುಕರಿಂದ ನಿರಂತರ ಅತ್ಯಾಚಾರ*

ಘಟನೆ ನಡೆದ ಹೋಟೆಲ್ ಗಳು ಸಂಪೂರ್ಣ ಧ್ವಂಸ


ಪ್ರಗತಿವಾಹಿನಿ ಸುದ್ದಿ: ಇಡೀ ದೇಶವೇ ಬೆಚ್ಚಿ ಬೀಳುವಂತಹ ಹೇಯ ಘಟನೆ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಡೆದಿದೆ. 13 ವರ್ಷದ ಬಾಲಕಿ ಮೇಲೆ 30 ಜನರು ನಿರಂತರವಾಗಿ 5 ದಿನಗಳ ಕಾಲ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.

ಸಂಬಂಧಿಕರ ಮನೆಯಿಂದ ಬಾಲಕಿ ತನ್ನ ಮನೆಗೆ ಹೋಗಲು ಜೂನ್ 14ರಂದು ಬಾಲಕಿ ಆಟೋ ಹತ್ತಿದ್ದಳು. ಆ ಆಟೋ ಚಾಲಕ ಬಾಲಕಿಯನ್ನು ಆಕೆಯ ಮನೆಗೆ ಬಿಡದೇ ಹೋಟೆವೊಂದರ ಬಳಿ ಕರೆತಂದವನು ಹೋಟೆಲ್ ಮಾಲೀಕನಿಗೆ ಬಾಲಕಿಯನ್ನು ಮಾರಾಟ ಮಾಡಿ ಹಣ ಪಡೆದು ಎಸ್ಕೇಪ್ ಆಗಿದ್ದಾನೆ.

Home add -Advt

ಬಾಲಕಿಯನ್ನು ಎಳೆದೊಯ್ದ ಹೋಟೆಲ್ ಮಾಲೀಕ ರೂಮ್ ನಲ್ಲಿ ಬಾಲಕಿಯನ್ನು ಕೂಡಿಹಾಕಿದ್ದಾನೆ. ಬಳಿಕ ಹತ್ತಕ್ಕೂ ಹೆಚ್ಚು ಹೋಟೆಲ್ ಮಾಲೀಕರು ಸ್ಥಳಕ್ಕಾಗಮಿಸಿ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾರೆ. ಬಾಲಕಿ ನೋವಿನಿಂದ ಚೀರಾಡುತ್ತಿದಂತೆ ಪದೇ ಪದೇ ಮದ್ಯ ಕುಡಿಸಿ ಆಕೆಯನ್ನು ಮೌನವಾಗಿಸಿ ಮದ್ಯದ ನಶೆಯಲ್ಲಿದ್ದಾಗಲೇ ಬಾಲಕಿ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ.

ಬಾಲಕಿಯನ್ನು ಬೇರೆ ಬೇರೆ ಹೋಟೆಲ್ ಗಳಿಗೆ ಕರೆದೊಯ್ದು ಅಲ್ಲಿಯೂ ಅತ್ಯಚಹಾರವೆಸಗಿದ್ದಾರೆ. ಬಾಲಕಿ ಮನೆಗೆ ಬಾರದಿದ್ದಾಗ ಕಂಗಾಲಾದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ನಿರಂತರ ಅತ್ಯಾಚಾರದಿಂದಾಗಿ ಬಾಲಕಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಸಾವು-ಬದುಕಿನ ನಡುವೆ ಹೋರಾಅಟ ನಡೆಸುತ್ತಿದ್ದು, ತನ್ನ ಮೇಲೆ ಅತ್ಯಾಚಾರವೆಸಗಿದವರಿಗೆ, ಹೋಟೆಲ್ ಮಾಲೀಕರಿಗೆ ಕಯ್ಠಿಣ ಶಿಕ್ಷೆಯಾಗಬೇಕು. ಕೃತ್ಯಕ್ಕೆ ಪೊಲೀಸರು ಸಾಥ್ ನೀಡಿದ್ದು, ಅವರ ಕೃತ್ಯವೂ ಹೊರವರಲಿದೆ. ಅವರಿಗೂ ಶಿಕ್ಷೆಯಾಗಬೇಕು ಎಂದು ನರಳಾಡುತ್ತಾ ಕಣ್ಣೀರಿಡುತ್ತಿದ್ದಾಳೆ.

ಘಟನೆ ಬಹಿರಣ್ಗವಾಗುತ್ತಿದ್ದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಕಾಮುಕರನ್ನು ಹೆಡೆಮುರಿಕಟ್ಟುವಂತೆ ಒತ್ತಾಯ ಕೇಳಿಬಂದಿದೆ. ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ರಾಜಸ್ಥಾನ ಸರ್ಕಾರ ಬಾಲಕಿ ಮೇಲೆ ಅತ್ಯಾಚಾರ ನಡೆದ ಎಲ್ಲಾ ಹೋಟೆಲ್ ಗಳನ್ನು ಧ್ವಂಸಗೊಳಿಸಿ, ನೆಲಸಮ ಮಾಡಿದೆ. ಆಟೋ ಚಾಲಕ ಹಾಗೂ ಹೋಟೆಲ್ ಮಾಲೀಕರು, ಮ್ಯಾನೇಜರ್ ಗಳು ಸೇರಿ ಈವರೆಗೆ 14 ಜನರನ್ನು ಬಂಧಿಸಲಾಗಿದೆ. ತನಿಖೆಗೆ ಎಸ್ ಐಟಿ ರಚನೆಯಾಗಿದ್ದು, ತಲೆ ಮರೆಸಿಕೊಂಡಿರುವ ದುರುಳರ ಬಂಧನಕ್ಕೆ ಬಲೆ ಬೀಸಲಾಗಿದೆ.

Related Articles

Back to top button