Belagavi NewsBelgaum NewsKannada NewsKarnataka NewsNationalPolitics

*ಬೆಳಗಾವಿ ಗ್ರಾಮೀಣ ಮತಕ್ಷೇತ್ರ: ಮತದಾರರ ಸಮಗ್ರ ಪರಿಷ್ಕರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತ ಚುನಾವಣಾ ಆಯೋಗ ನವದೆಹಲಿ ರವರು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 (SIR) ನೇದ್ದಕ್ಕೆ ಸಂಬಂಧಿಸಿದಂತೆ ಈಗಾಗಲೇ ವೇಳಾಪಟ್ಟಿಯನ್ನು ಹೊರಡಿಸಿರುತ್ತಾರೆ. ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಜೂನ್ 30 2026 ರಿಂದ 13-ಬೆಳಗಾವಿ ಗ್ರಾಮೀಣ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು (BLO) ರವರು Enumeration Forms ನೊಂದಿಗೆ ಮತದಾರರ ಮನೆ-ಮನೆಗೆ ಭೇಟಿ ನೀಡುವ ಕಾರ್ಯ ಪ್ರಾರಂಭಗೊಂಡಿರುತ್ತದೆ.

13-ಬೆಳಗಾವಿ ಗ್ರಾಮೀಣ ವಿಧಾನ ಸಭಾಕ್ಷೇತ್ರದ ದಿನಾಂಕ: 6-06-2026 ರ ವರೆಗೆ ಹೊಂದಿರುವ ಒಟ್ಟು 266282 ಮತದಾರರು ಇದ್ದು, Enumeration Forms ಗಳು ಮುದ್ರಿಸಿ ಸಂಬಂಧಿಸಿದ ಬಿಎಲ್‌ ಒಗಳಿಗೆ ಒದಗಿಸಲಾಗಿರುತ್ತದೆ.

ಮ್ಯಾಪಿಂಗ್ ಮಾಡಿರುವ ಒಟ್ಟು ಮತದಾರರು 258156, ಮನೆ-ಮನೆಗೆ ಭೇಟಿ ನೀಡುವ ಅವದಿ, ಜೂನ್ 30 2026 ರಿಂದ ಜುಲೈ 29 2026. ಸಂಗ್ರಹಿಸಿದ ನಮೂನೆಗಳು ಗಣಕೀಕರಣ ಅವಧಿ ಜೂನ್ 30 2026 ರಿಂದ ಜುಲೈ 29 2026.

ಜುಲೈ 15, 2026ರ ಸಂಜೆ 4, ಗಂಟೆ ವರೆಗಿನ ಮಾಡಿದ ಪ್ರಗತಿ, ವಿಧಾನಸಭಾ ಕ್ಷೇತ್ರದ ಸಂಖ್ಯೆ & ಹೆಸರು 13-ಬೆಳಗಾವಿ ಗ್ರಾಮೀಣ ಒಟ್ಟು ಮತದಾರರು, 266282, ಬಿಎಲ್‌ಒ ರವರು ವಿತರಿಸಿದ ಎನುಮೆರೇಷನ್ (EF) ನಮೂನೆಗಳ ಸಂಖ್ಯೆ 265954 (99.88%) ಬಿಎಲ್‌ಒರವರು ಗಣಕೀಕರಿಸಿದ ಎನುಮೆರೇಷನ್ (EF) ಗಳ ಸಂಖ್ಯೆ 141789 (53.25%) ಆಗಿರುತ್ತೆ.

Home add -Advt

ಮತದಾರರ ನೋಂದಣಾಧಿಕಾರಿ ಶಕೀಲಹ್ಮದ ಸಿ.ಡಬ್ಲ್ಯೂ ಹಾಗೂ 13-ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಸಹಾಯಕ ಮತದಾರರ ನೋಂದಣಾಧಿಕಾರಿ ಎಚ್. ಎನ್. ಶಿರಹಟ್ಟಿ ರವರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಿಲ್‌ಓ ಅವರಿಗೆ ಭೇಟಿ ನೀಡಿ ಹೆಚ್ಚಿನ ಪ್ರಗತಿ ಸಾಧಿಸಲು ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಿದರು.

Related Articles

Back to top button