Kannada NewsKarnataka NewsLatest

*ಇಂಡಿಗೋ ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆಯ ಚೀಟಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಇಂಡಿಗೋ ವಿಮಾನದ ಶೌಚಾಲಯದ ಒಳಗೆ ಬಾಂಬ್ ಬೆದರಿಕೆಯ ಚೀಟಿ ಪತ್ತೆಯಾಗಿರುವ ಘಟನೆ ನಡೆದಿದೆ. ಇದು ಕೆಲ ಕಾಲ ವಿಮಾನಯಾನ ಸಿಬ್ಬಂದಿ, ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿದೆ.

ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ 6E-6423 (BLR-AMD) ವಿಮಾನದ ಶೌಚಾಲಯದ ಒಳಗೆ ಬೆದರಿಕೆಯ ಚೀಟಿ ಪತ್ತೆಯಾಗಿದೆ. ಪತ್ತೆಯಾದ ಚೀಟಿಯಲ್ಲಿ “ದಯವಿಟ್ಟು ಹೋಗಬೇಡಿ, ಬಾಂಬ್ ಇದೆ” ಎಂದು ಬರೆದಿದೆ. ವಿಚಾರ ಗೊತ್ತಾಗಿ ಪ್ರಯಾಣಿಕರು ಭಯಗೊಂಡಿದ್ದಾರೆ.

ಬೆದರಿಕೆಯ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಗುರುವಾರ ಸಂಜೆ 7:30ಕ್ಕೆ ಹೊರಡಬೇಕಿದ್ದ ವಿಮಾನ ಐದು ಗಂಟೆ ತಡವಾಗಿ ಟೇಕ್ ಆಫ್ ಆಗಿದೆ. ಈ ಸಂಬಂಧ ಎಟಿಸಿಯಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಓರ್ವ ಪ್ರಯಾಣಿಕನೇ ಈ ಚೀಟಿ ಬರೆದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಯಾಣಿಕನ ವಿರುದ್ಧ ದೂರು ದಾಖಲಾಗಿದೆ.

Home add -Advt


Related Articles

Back to top button